ಇಂಡಿಯನ್‌ ಎಫ್‌4 ರೇಸ್‌ನಲ್ಲಿರಾಜ್ಯದ ರಿಶೊನ್‌ ರನ್ನರ್‌-ಅಪ್‌!

| Published : Dec 28 2023, 01:45 AM IST

ಇಂಡಿಯನ್‌ ಎಫ್‌4 ರೇಸ್‌ನಲ್ಲಿರಾಜ್ಯದ ರಿಶೊನ್‌ ರನ್ನರ್‌-ಅಪ್‌!
Share this Article
  • FB
  • TW
  • Linkdin
  • Email

ಸಾರಾಂಶ

ಎಫ್4 ರೇಸ್‌ನಲ್ಲಿ ರನ್ನರ್‌-ಅಪ್‌ ಆದ ಮೊದಲ ಭಾರತೀಯ ಎನಿಸಿಕೊಂಡಿರುವ ರಿಶೊನ್‌, ಎಫ್‌1 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಬೇಕಾಗಿರುವ ಎಫ್‌ಐಎ ಸೂಪರ್‌ ಲೈಸನ್ಸ್‌ನ ಅಂಕಗಳನ್ನೂ ಮೊದಲ ಬಾರಿ ಪಡೆದುಕೊಂಡಿದ್ದಾರೆ.

ಚೆನ್ನೈ: ಚೊಚ್ಚಲ ಬಾರಿ ನಡೆದ ಇಂಡಿಯನ್‌ ಫಾರ್ಮುಲ್‌ 4 ಕಾರ್‌ ರೇಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಹಾಸನದ ರಿಶೊನ್‌ ರಾಜೀವ್‌ ರನ್ನರ್‌-ಅಪ್‌ ಆಗಿ ಹೊರಹೊಮ್ಮಿದ್ದಾರೆ. ಎಫ್4 ರೇಸ್‌ನಲ್ಲಿ ರನ್ನರ್‌-ಅಪ್‌ ಆದ ಮೊದಲ ಭಾರತೀಯ ಎನಿಸಿಕೊಂಡಿರುವ ರಿಶೊನ್‌, ಎಫ್‌1 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಬೇಕಾಗಿರುವ ಎಫ್‌ಐಎ ಸೂಪರ್‌ ಲೈಸನ್ಸ್‌ನ ಅಂಕಗಳನ್ನೂ ಮೊದಲ ಬಾರಿ ಪಡೆದುಕೊಂಡಿದ್ದಾರೆ.

ನ.4ರಿಂದ ಡಿ.17ರ ವರೆಗೆ ಚೆನ್ನೈನಲ್ಲಿ ನಡೆದ, ಒಟ್ಟು 17 ರೇಸರ್‌ಗಳು ಪಾಲ್ಗೊಂಡಿದ್ದ ಚಾಂಪಿಯನ್‌ಶಿಪ್‌ನಲ್ಲಿ 18ರ ರಿಶೊನ್‌ 2ನೇ ಸ್ಥಾನಿಯಾದರು. ಆಸ್ಟ್ರೇಲಿಯಾದ ಕೂಪರ್‌ ವೆಬ್‌ಸ್ಟೆರ್‌ ಚಾಂಪಿಯನ್‌ ಎನಿಸಿಕೊಂಡರೆ, ಅಮೆರಿಕದ ಅಕ್ಷಯ್‌ ಬೊಹಾರ 3ನೇ ಸ್ಥಾನಿಯಾದರು. ಈ ವರೆಗೆ ಕೆಲ ಅಂತಾರಾಷ್ಟ್ರೀಯ ಕೂಟಗಳಲ್ಲಿ ರಿಶೊನ್‌ ಸ್ಪರ್ಧಿಸಿದ್ದರೂ ಇದೇ ಮೊದಲ ಬಾರಿ ಪದಕ ಗೆದ್ದಿದ್ದಾರೆ. ಈಗಾಗಲೇ ಕಿರಿಯರ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಕಿಶೊನ್, ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೊದಲ ಪ್ರಯತ್ನದಲ್ಲೇ ಸದ್ದು ಮಾಡಿದ್ದಾರೆ.

-11ನೇ ವರ್ಷಕ್ಕೇ ಚತುರ ರೇಸರ್‌

ಬಾಲ್ಯದಲ್ಲೇ ರೇಸಿಂಗ್‌ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ರಿಶೊನ್‌ 2011ರಲ್ಲಿ ಕಾರ್ಟಿಂಗ್‌ ರೇಸ್‌ನಲ್ಲಿ ಮೊದಲ ಬಾರಿ ಪಾಲ್ಗೊಂಡು, ತಮ್ಮ ಕೌಶಲ್ಯದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. 2017ರಲ್ಲಿ ಗೊ-ಗಾರ್ಟಿಂಗ್‌ ರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡ ಕಿಶೊನ್‌ ಉದಯೋನ್ಮುಖ ರೇಸರ್‌ ಪ್ರಶಸ್ತಿಗೂ ಭಾಜನರಾದರು. 2018ರಲ್ಲಿ ಗೊ-ಗಾರ್ಟಿಂಗ್ ಇಟಾಲಿಯನ್‌ ಚಾಂಪಿಯನ್‌ಶಿಪ್‌ ಮೂಲಕ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದರು. 2020ರಲ್ಲಿ ಕಿರಿಯರ ವಿಭಾಗದಲ್ಲಿ ಕಾರ್ಟಿಂಗ್‌ ಚಾಂಪಿಯನ್‌ ಎನಿಸಿಕೊಂಡರು. 2021ರಲ್ಲಿ ಮೊದಲ ಬಾರಿ ಸಿಂಗಲ್‌ ಸೀಟರ್‌ ರೇಸ್‌ನಲ್ಲಿ ಪಾಲ್ಗೊಂಡ ಅವರು, ಎಂಆರ್‌ಎಫ್‌ ಫಾರ್ಮುಲಾ1600 ಚಾಂಪಿಯನ್‌ಶಿಪ್‌ನಲ್ಲಿ ರನ್ನರ್‌-ಅಪ್‌ ಆಗಿದ್ದಾರೆ.