ಈಡನ್‌ ಗಾರ್ಡನ್ಸ್‌ನಲ್ಲಿ ಇಂದು ಕೆಕೆಆರ್‌ vs ಲಖನೌ ಕಾದಾಟ - 4ರಲ್ಲಿ ತಲಾ 2 ಪಂದ್ಯ ಗೆದ್ದಿರುವ ಉಭಯ ತಂಡಗಳು

| N/A | Published : Apr 08 2025, 05:42 AM IST

kkr vs srh ipl 2025
ಈಡನ್‌ ಗಾರ್ಡನ್ಸ್‌ನಲ್ಲಿ ಇಂದು ಕೆಕೆಆರ್‌ vs ಲಖನೌ ಕಾದಾಟ - 4ರಲ್ಲಿ ತಲಾ 2 ಪಂದ್ಯ ಗೆದ್ದಿರುವ ಉಭಯ ತಂಡಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸೋಲಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಹಾಲಿ ಚಾಂಪಿಯನ್‌ ಕೋಲ್ಕತಾ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ.

ಕೋಲ್ಕತಾ: ಸೋಲಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ಗೆಲುವಿನ ಲಯಕ್ಕೆ ಮರಳಿರುವ ಹಾಲಿ ಚಾಂಪಿಯನ್‌ ಕೋಲ್ಕತಾ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ. ಆಡಿರುವ 4 ಪಂದ್ಯಗಳಲ್ಲಿ ತಲಾ 2ರಲ್ಲಿ ಗೆದ್ದಿರುವ ಉಭಯ ತಂಡಗಳು ಮತ್ತೊಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿವೆ.

ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ಈ ಬಾರಿ ಉತ್ತಮವಾಗಿಯೇ ಆಡುತ್ತಿದೆ. ಆದರೆ ತಂಡಕ್ಕೆ ಸಮಸ್ಯೆ ಇರುವುದು ಆರಂಭಿಕ ಜೋಡಿಯಲ್ಲಿ. ಕ್ವಿಂಟನ್‌ ಡಿ ಕಾಕ್‌ ಹಾಗೂ ಸುನಿಲ್‌ ನರೈನ್‌ರಿಂದ ತಂಡಕ್ಕೆ ಅಬ್ಬರದ ಆರಂಭ ಸಿಗುತ್ತಿಲ್ಲ. ಅದರಲ್ಲೂ ನರೈನ್‌ ಅಸ್ಥಿರ ಆಟ ತಂಡಕ್ಕೆ ತಲೆನೋವಾಗಿದೆ. ಆ್ಯಂಡ್ರೆ ರಸೆಲ್‌ ಕೂಡಾ ನಿರೀಕ್ಷಿತ ಆಟವಾಡುತ್ತಿಲ್ಲ. ವೆಂಕಟೇಶ್‌ ಅಯ್ಯರ್‌, ರಘುವಂಶಿ, ರಿಂಕು ಸಿಂಗ್‌ ಜೊತೆ ಬೌಲಿಂಗ್‌ ವಿಭಾಗದಲ್ಲಿ ವರುಣ್‌ ಚಕ್ರವರ್ತಿ, ವೈಭವ್‌ ಅರೋರಾ ತಂಡಕ್ಕೆ ಬಲ ಒದಗಿಸಲಿದ್ದಾರೆ.

ಇನ್ನು ಲಖನೌ ತಂಡ ನಿಕೋಲಸ್‌ ಪೂರನ್‌, ಮಿಚೆಲ್‌ ಮಾರ್ಷ್‌ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಇಬ್ಬರೂ ಮತ್ತೊಂದು ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆಯಲ್ಲಿದ್ದಾರೆ. ಆದರೆ ₹27 ಕೋಟಿಗೆ ಹರಾಜಾಗಿದ್ದರೂ 4 ಪಂದ್ಯಗಳಲ್ಲಿ ಕೇವಲ 19 ರನ್‌ ಕಲೆಹಾಕಿರುವ ನಾಯಕ ರಿಷಭ್‌ ಪಂತ್‌, ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ. ಯುವ ಸ್ಪಿನ್ನರ್‌ ದಿಗ್ವೇಶ್‌ ರಾಠಿ ಪಂದ್ಯದ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ.

ಮುಖಾಮುಖಿ: 05

ಕೆಕೆಆರ್‌: 02

ಲಖನೌ: 03

ಸಂಭಾವ್ಯ ಆಟಗಾರರು

ಕೆಕೆಆರ್‌: ಡಿ ಕಾಕ್‌, ನರೈನ್‌, ರಹಾನೆ(ನಾಯಕ), ರಘುವಂಶಿ, ವೆಂಕಟೇಶ್‌, ರಿಂಕು ಸಿಂಗ್‌, ರಸೆಲ್‌, ರಮನ್‌ದೀಪ್‌, ಸ್ಪೆನ್ಸರ್‌, ಹರ್ಷಿತ್‌, ವರುಣ್‌, ವೈಭವ್‌.

ಲಖನೌ: ಮಾರ್ಕ್‌ರಮ್‌, ಮಾರ್ಷ್‌, ಪೂರನ್‌, ರಿಷಭ್‌(ನಾಯಕ), ಬದೋನಿ, ಮಿಲ್ಲರ್‌, ಸಮದ್‌, ಶಾರ್ದೂಲ್‌, ದಿಗ್ವೇಶ್‌, ಆಕಾಶ್‌, ಆವೇಶ್‌, ರವಿ ಬಿಷ್ಣೋಯ್‌.

ಪಂದ್ಯ: ಮಧ್ಯಾಹ್ನ 3.30ಕ್ಕೆ

ಪಿಚ್‌ ರಿಪೋರ್ಟ್‌

ಈಡನ್‌ ಗಾರ್ಡನ್ಸ್ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಟೂರ್ನಿಯ ಆರಂಭಿಕ 2 ಪಂದ್ಯಗಳ 4 ಇನ್ನಿಂಗ್ಸ್‌ಗಳ ಪೈಕಿ 3ರಲ್ಲಿ 170+ ರನ್‌ ದಾಖಲಾಗಿವೆ.