ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 4 ವಿಕೆಟ್‌ ಅಂತರದಲ್ಲಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ

ಕೋಲ್ಕತಾ: ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 4 ವಿಕೆಟ್‌ ಅಂತರದಲ್ಲಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ತಂಡ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 13 ಅಂಕ ಸಂಪಾದಿಸಿದ್ದು, ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಮುಂಬೈ ಆಡಿರುವ 13 ಪಂದ್ಯಗಳಲ್ಲಿ 9ನೇ ಸೋಲನುಭವಿಸಿತು.

ಮೊದಲು ಬ್ಯಾಟ್‌ ಮಾಡಿದ ಮುಂಬೈ 8 ವಿಕೆಟ್‌ ನಷ್ಟದಲ್ಲಿ 147 ರನ್‌ ಗಳಿಸಿತು. ತೀವ್ರ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ತಂಡ 18 ಓವರ್‌ನಲ್ಲಿ 115 ರನ್‌ ಗಳಿಸಿತ್ತು. ಕೊನೆ 2 ಓವರ್‌ನಲ್ಲಿ ಕಾರ್ಬಿನ್‌ ಬಾಶ್(ಔಟಾಗದೆ 32) ಅಬ್ಬರಿಸಿದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉಳಿದಂತೆ ಹಾರ್ದಿಕ್‌ 26, ತಿಲಕ್‌ 20 ರನ್‌ ಕೊಡುಗೆ ನೀಡಿದರು.

ಮನೀಶ್‌, ಪೊವೆಲ್‌ ಆಸರೆ:

ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕೋಲ್ಕತಾಗೆ ಮನೀಶ್‌ ಪಾಂಡೆ, ರೋವ್ಮನ್‌ ಪೊವೆಲ್‌ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 64 ರನ್‌ ಸೇರಿಸಿತು. ಪೊವೆಲ್ 30 ಎಸೆತಕ್ಕೆ 40, ಮನೀಶ್‌ 33 ಎಸೆತಕ್ಕೆ 45 ರನ್‌ ಗಳಿಸಿದರು. ತಂಡ 18.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಕಾರ್ಬಿನ್‌ 3 ವಿಕೆಟ್‌ ಕಿತ್ತರು.

ಸ್ಕೋರ್‌: ಮುಂಬೈ 20 ಓವರಲ್ಲಿ 147/8 (ಕಾರ್ಬಿನ್‌ ಔಟಾಗದೆ 32, ಹಾರ್ದಿಕ್‌ 26, ಗ್ರೀನ್‌ 2-23), ಕೋಲ್ಕತಾ 18.5 ಓವರಲ್ಲಿ 148/6 (ಮನೀಶ್‌ 45, ಪೊವೆಲ್‌ 40, ಕಾರ್ಬಿನ್‌ 3-30)

ಪಂದ್ಯಶ್ರೇಷ್ಠ: 

42 ಪಂದ್ಯದಲ್ಲಿ ಯಶಸ್ವಿ

ಚೇಸ್‌: ಹೊಸ ದಾಖಲೆ

ಈ ಬಾರಿ ಐಪಿಎಲ್‌ನಲ್ಲಿ ನಡೆದಿರುವ 65 ಪಂದ್ಯಗಳ ಪೈಕಿ 42ರಲ್ಲಿ ಚೇಸಿಂಗ್ ತಂಡಗಳು ಗೆಲುವು ಸಾಧಿಸಿದೆ. ಐಪಿಎಲ್‌ ಆವೃತ್ತಿಯೊಂದರಲ್ಲಿ ಇದು ಗರಿಷ್ಠ. 2026ರ ಐಪಿಎಲ್‌ನಲ್ಲಿ 60 ಪಂದ್ಯಗಳ ಪೈಕಿ 41ರಲ್ಲಿ ತಂಡಗಳು ಯಶಸ್ವಿಯಾಗಿ ರನ್‌ ಬೆನ್ನತ್ತಿ ಗೆದ್ದಿದ್ದವು.