ಕೊಡವ ಕೌಟುಂಬಿಕ ಹಾಕಿ: ಅಂಜಪರವಂಡ, ಚೌರೀರ ತಂಡಗಳಿಗೆಭರ್ಜರಿ ಜಯ

| Published : Apr 15 2024, 01:28 AM IST / Updated: Apr 15 2024, 04:18 AM IST

ಸಾರಾಂಶ

ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ನಡುವಿನ ಟೂರ್ನಿ. ಹಾಕಿ ಫೆಸ್ಟ್‌ನೊಂದಿಗೆ ಭಾನುವಾರ ಫುಡ್ ಫೆಸ್ಟ್ ಜನಮನ ಸೆಳೆಯಿತು.

ದುಗ್ಗಳ ಸದಾನಂದ

 ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ದಿನದ ಮೊದಲ ಪಂದ್ಯದಲ್ಲಿ ಅಂಜಪರವಂಡ ತಿರುತೆರ ವಿರುದ್ಧ ಭರ್ಜರಿ ಜಯಗಳಿಸಿತು. ಅಂಜಪರವಂಡ ತಂಡ 5 ಗೋಲು ದಾಖಲಿಸಿದರೆ ತಿರುತೆರ ಕೇವಲ ಒಂದು ಗೋಲು ಗಳಿಸಿತು.

ಮಲ್ಚಿರ ಮತ್ತು ಚೌರೀರ (ಹೊದ್ದೂರು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡ 3.0 ರಿಂದ ಜಯ ದಾಖಲಿಸಿತು. ಕೂತಂಡ ತಂಡ ಬೇಪಡಿಯಂಡ ವಿರುದ್ಧ 4-0 ರಿಂದ ಗೆಲುವು ಸಾಧಿಸಿದರೆ ಪಾಂಡಂಡ ಮತ್ತು ಚಂಗುಲಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಬಳಿಕ ಟೈ ಬ್ರೇಕರ್ ನಲ್ಲಿ 4-3 ಅಂತರದಿಂದ ಪಾಂಡಂಡ ಚಂಗುಲಂಡ ವಿರುದ್ಧ ಜಯ ಸಾಧಿಸಿತು.

ಬಾಳೆಯಡ ತಂಡ ಕಾಂಡಂಡ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದರೆ ಚಂದುಮಾಡ ಮಾಪಣಮಾಡ ತಂಡದ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದರೆ ಮಣವಟ್ಟಿರ ಮತ್ತು ಮಾಲೆಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಣವಟ್ಟಿರ 2-0 ಅಂತರದಿಂದ ಜಯ ದಾಖಲಿಸಿತು. ವಲ್ಲಂಡ ಮತ್ತು ನೆರವಂಡ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. ನೆರವಂಡ 3- 0 ಅಂತರದಿಂದ ವಲ್ಲಂಡ ವಿರುದ್ಧ ಜಯಗಳಿಸಿತು.

ಸ್ಥಳೀಯರ ಜೈಕಾರಗಳ ನಡುವೆ ಕಣಕ್ಕಿಳಿದ ಕುಲ್ಲೇಟಿರ ತಂಡ ಉದಿಯಂಡ ವಿರುದ್ಧ 4-0 ಭರ್ಜರಿ ಗೆಲುವು ದಾಖಲಿಸಿತು. ಮೂಕಂಡ ತಂಡ ಕುಮ್ಮಂಡ ವಿರುದ್ಧ 4-2 ಅಂತರದಿಂದ ಜಯಸಾಧಿಸಿದರೆ ಚೆಪ್ಪುಡಿರ ಚೊಟ್ಟೆಯಂಡಮಾಡ ವಿರುದ್ಧ 6-0 ಅಂತರದಲ್ಲಿ ಜಯ ದಾಖಲಿಸಿತು. ಬೊಳ್ಳಂಡ ಕಾಣತಂಡ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿದರೆ ಚಿರಿಯಪಂಡ ಮಾಚಿಮಾಡ ವಿರುದ್ಧ 3-1 ಅಂತರದ ಗೆಲುವು ದಾಖಲಿಸಿತು. ಮುಂದಿನ ಪಂದ್ಯದಲ್ಲಿ ಪುಲ್ಲಂಗಡ ಇಟ್ಟಿರ ವಿರುದ್ಧ 3-1 ಅಂತರದ ಗೆಲುವು ಸಾಧಿಸಿತು. ಚೇನಂಡ ಕೇಲಪಂಡ ವಿರುದ್ಧ 3-0 ಅಂತರದಿಂದ ಮುನ್ನಡೆ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಐಚೆಟ್ಟೀರ ಚಂಗೇಟಿರ ವಿರುದ್ಧ 2-0 ರಲ್ಲಿ ಜಯ ಗಳಿಸಿತು.