ಕೊಡವ ಕೌಟುಂಬಿಕ ಹಾಕಿ: 17 ತಂಡಗಳು ಮುಂದಿನ ಸುತ್ತು ಪ್ರವೇಶ

| Published : Apr 07 2024, 01:55 AM IST / Updated: Apr 07 2024, 04:32 AM IST

ಸಾರಾಂಶ

ಕುಮ್ಮಂಡ ತಂಡವು ನುಚ್ಚುಮಣಿಯಂಡ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿತು. ಚೋಯಮಾಡಂಡ ತಂಡಕ್ಕೆ ಕನ್ನಂಬಿರ ವಿರುದ್ಧ 3-0 ಅಂತರದ ಜಯ ಲಭಿಸಿತು.

ದುಗ್ಗಳ ಸದಾನಂದ

  ನಾಪೋಕ್ಲು :  ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಕೋಡಿರ ಕುಪ್ಪಂಡ, ಕುಮ್ಮಂಡ, ಚೋಯಮಾಡಂಡ, ಮಲ್ಲಂಗಡ, ಕಾಣತಂಡ, ಅನ್ನಾಡಿಯಂಡ ಸೇರಿದಂತೆ 17 ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.ಚೆಟ್ರು ಮಾಡತಂಡದ ವಿರುದ್ಧ ಕೋಡಿರ ತಂಡವು 4 -0 ಅಂತರದ ಗೆಲುವು ಸಾಧಿಸಿತು. ಕೋಡಿರ ತಂಡದ ಆಟಗಾರರಾದ ರೋಶನ್ ಬೆಳ್ಳಿಯಪ್ಪ ಎರಡು ಗೋಲು ಗಳಿಸಿದರೆ, ಅಪ್ಪಣ್ಣ ಹಾಗೂ ರಾಬಿನ್ ಬ್ಬಯ್ಯ ತಲಾ ಒಂದು ಗೋಲು ಗಳಿಸಿದರು. ಕುಮ್ಮಂಡ ತಂಡವು ನುಚ್ಚುಮಣಿಯಂಡ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿತು. ಚೋಯಮಾಡಂಡ ತಂಡಕ್ಕೆ ಕನ್ನಂಬಿರ ವಿರುದ್ಧ 3-0 ಅಂತರದ ಜಯ ಲಭಿಸಿತು.

ಐಚಂಡ ತಂಡವು ಟೈ ಬ್ರೇಕರ್ ನಲ್ಲಿ ಭಯವಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಬಯವಂಡ ನಾಲ್ಕು ಗೋಲು ಗಳಿಸಿತು. ಮಲ್ಲಂಗಡ ಮತ್ತು ಪೂದ್ರಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಲ್ಲಂಗಡ 3-0 ಅಂತರದ ಗೆಲುವು ಸಾಧಿಸಿತು. ಅಂತೆಯೇ ಕಾಣತಂಡ ಕುಟ್ಟಂಡ ವಿರುದ್ಧ, ಅನ್ನಾಡಿಯಂಡ ಕಲಿಯಾಟಂಡ ವಿರುದ್ಧ 3-0 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು. ಟೈ ಬ್ರೇಕರ್ ನಲ್ಲಿ ಮಾದಂಡ ತಂಡ ಚೋದುಮಾಡ ವಿರುದ್ಧ 4-3 ಅಂತರದ ಗೆಲುವು ಸಾಧಿಸಿತು.

ಬೊಳ್ಳಂಡ ತಿರೋಡಿರ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದರೆ ಪಾಡೆಯಂಡ ಅಲ್ಲಾಪಿರ ತಂಡದ ವಿರುದ್ಧ 3- 0 ಅಂತರದಿಂದ, ಮಾಳೆಯಂಡ ಮಲ್ಲಮಡ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.

ಇಟ್ಟಿರ ತಂಡವು ಚೌರಿರ( ಹೊದವಾಡ) ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿತು. ಕೊಕ್ಕಂಡ ತಂಡಕ್ಕೆ ಕಲ್ಲುಮಾಡಂಡ 2-0 ಅಂತರದ ಜಯಲಭಿಸಿತು. ಕಡಿಯ ಮಾಡ ತಂಡದ ಆಟಗಾರರು ಅಚ್ಚಾಂಡಿರ ವಿರುದ್ಧ 4-0 ಅಂತರದ ಗೆಲುವು ಸಾಧಿಸಿದರೆ ಕಾಂಡಂಡ ಚೆಟ್ಟಿಯಾರಂಡ ವಿರುದ್ಧ 4-0 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊಪ್ಪಂಡ ಚೀಯಂಡೀರ ವಿರುದ್ದ 3-1 ಅಂತರದ ಗೆಲುವು ಸಾಧಿಸಿತು, ಕಂಜಿತಂಡ ಮದ್ರೀರ ವಿರುದ್ಧ ಟೈಬ್ರೇಕರ್ ನಲ್ಲಿ 3-1 ಅಂತರದ ಗೆಲುವು ಪಡೆಯಿತು. ಪುಲ್ಲಂಗಡ ಮುಂದಿನ ಸುತ್ತು ಪ್ರವೇಶಿಸಿತು.