ಕೊಡವ ಕೌಟುಂಬಿಕ ಹಾಕಿ: ಅಳ್ತಂಡ, ಮಂಜಂಡಕ್ಕೆ ಸುಲಭ ಗೆಲುವು

| Published : Apr 05 2024, 01:11 AM IST / Updated: Apr 05 2024, 04:00 AM IST

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಕೂಟ. ಪೆಬ್ಬೆಟ್ಟಿರ ವಿರುದ್ಧ ಮಲ್ಲಜ್ಜಿರಕ್ಕೆ ಭಾರಿ ಅಂತರದ ಮುನ್ನಡೆ.

ದುಗ್ಗಳ ಸದಾನಂದ

 ನಾಪೋಕ್ಲು : ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ಅಳ್ತಂಡ ಬೋಳಿಯಾಡಿರ ವಿರುದ್ಧ, ಮಂಜಂಡ ಪೊನ್ನ ಕಚ್ಚಿರ ತಂಡಗಳ ವಿರುದ್ಧ 1- 0 ಅಂತರದ ಗೆಲುವು ಸಾಧಿಸಿದವು.

ಬಡ್ಡೀರ ಚಾರಿಮಂಡದ ವಿರುದ್ದ, ಕಾಲಚಂಡ ಬೊಳ್ಳಚೆಟ್ಟೀರ ತಂಡಗಳ ವಿರುದ್ಧ 1- 0 ಅಂತರದ ಗೆಲುವು ಸಾಧಿಸಿದವು. ಕಳ್ಳೀರ ತಂಡವು ಮುಕ್ಕಾಟಿರ( ಕುಂಜಲಗೇರಿ) ತಂಡದ ವಿರುದ್ಧ 3 -1 ಅಂತರದ ಗೆಲುವು ಸಾಧಿಸಿದರೆ, ಬಡ್ಡಿರ ಚಾರಿಮಂಡ ವಿರುದ್ಧ 1-0 ಅಂತರದ ಗೆಲವು ಸಾಧಿಸಿತು. ಕುಂಡಚ್ಚಿರ ತಂಡವು ಮಾಪಂಗಡ ತಂಡದ ವಿರುದ್ಧ 2-1 ಅಂತರದ ಸೋಲನ್ನನುಭವಿಸಿತು. 

ಕಾಲಚಂಡ ತಂಡ ಬೊಳ್ಳ ಚೆಟ್ಟಿರ ವಿರುದ್ಧ 1-0 ಅಂತರದ ಗೆಲವು ಸಾಧಿಸಿದರೆ ಮಲ್ಲಜ್ಜಿರ ತಂಡ ಪೆಬ್ಬೆಟ್ಟಿರ ವಿರುದ್ಧ ಭರ್ಜರಿ ಜಯ ಸಾಧಿಸಿತು.ಮಲ್ಲಜ್ಜಿರ ತಂಡದ ಆಟಗಾರರು 5 ಗೋಲು ಗಳಿಸಿದರೆ ಪೆಬ್ಬಟ್ಟಿರ ತಂಡದ ಆಟಗಾರರು ಯಾವುದೇ ಗೋಲು ಗಳಿಸಲಿಲ್ಲ. ಉಳಿದಂತೆ ಸಿದ್ದಂಡ ವಿರುದ್ಧ ನಿಡುಮಂಡ, ಆಪಾಡಂಡ ವಿರುದ್ಧ ದಾಸಂಡ ಗೆಲವು ಸಾಧಿಸಿದವು. ದಾಸಂಡ 3- 0 ಅಂತರದಿಂದ ಗೆಲವು ಸಾಧಿಸಿತು.

ಸಮಬಲದ ಹೋರಾಟ: ಅಜ್ಜೆಟ್ಟಿರ ಮತ್ತು ಬಟ್ಟಿರ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು ಬಳಿಕ ಟೈ ಬ್ರೇಕರ್ ನಲ್ಲಿ ಅಜ್ಜೆಟ್ಟಿ ಮೋಹನ್ 3 ಗೋಲು ಗಳಿಸಿದರೆ ಬಟ್ಟೀರ ಬೋಜಣ್ಣ ಮತ್ತು ಬೋಪಣ್ಣ ತಲಾ ಒಂದು ಗೋಲು ಗಳಿಸಿದರು.ಪಟ್ಟಚೆರುವಾಳಂಡ ಮತ್ತು ಮಳವಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. 

ಟೈ ಬ್ರೇಕರ್ ನಲ್ಲಿ ಪಟ್ಟಚೆರುವಾಳಂಡ 5-4 ಅಂತರದಿಂದ ಮಳವಂಡ ತಂಡದ ವಿರುದ್ಧ ಗೆಲವು ಸಾಧಿಸಿತು. ಮುಕ್ಕಾಟಿರ (ಕುಂಬಳದಾಳು) ತಂಡವು ತಿರುತೆರ ತಂಡದ ವಿರುದ್ಧ 3-0 ಅಂತರದ ಗೆಲವು ಸಾಧಿಸಿತು.ಮಲ್ಲಂಡ ಬಾಚಿರ ವಿರುದ್ಧ 3-0 ಅಂತರದಿಂದ ಜಯಗಳಿಸಿತು. ಮಂಗೇರ ವಿರುದ್ಧ ಕೊಟ್ಟಂಗಡ ಮುಂದಿನ ಸುತ್ತು ಪ್ರವೇಶಿಸಿತು. ಮಚ್ಚಾರಂಡ ಐಮುಡಿಯಂಡ ವಿರುದ್ಧ ಜಯ ಸಾಧಿಸಿತು. ದೇಯಂಡ ಓಡಿಯಂಡ ವಿರುದ್ಧ ಟೈಬ್ರೇಕರ್‌ನಲ್ಲಿ 3-2 ಅಂತರದಿಂದ ಗೆದ್ದು ಮುಂದಿನ ಸುತ್ತು ಪ್ರವೇಶಿಸಿತು. ಉಳಿದಂತೆ ಪಳಂಗಿಯಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.