ಸಾರಾಂಶ
ದುಗ್ಗಳ ಸದಾನಂದ
ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶುಕ್ರವಾರದ ಪಂದ್ಯಗಳಲ್ಲಿ ಚೆರುಮಂದಂಡ, ತೆಕ್ಕಡ, ಕಂಗಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಚೆರುಮಂದಂಡ ತಂಡವು ಕೇಚೆಟ್ಟಿರ ವಿರುದ್ಧ 3-1 ಅಂತರದಿಂದ ಗೆಲುವು ಸಾಧಿಸಿತು. ತೆಕ್ಕಡ ತಂಡವು ನಾಯಕಂಡ ವಿರುದ್ಧ 4-0 ಅಂತರದಿಂದ ಗೆದ್ದರೆ ಕಳಂಗಡ ತಂಡವು ಆಪ್ಪಚ್ಚಿರ ವಿರುದ್ಧ 1-0 ಅಂತರದಿಂದ ಗೆದ್ದರೆ, ಕಂಗಂಡ ತಂಡವು ಪೊರ್ಕೊಂಡ ವಿರುದ್ಧ 5-0 ಅಂತರದಿಂದ ಭರ್ಜರಿ ಜಯ ಸಾಧಿಸಿತು. ಮೇಚಂಡ ತಂಡವು ಬಳ್ಳಂಡ ತಂಡದ ವಿರುದ್ಧ 5-0 ಅಂತರದಿಂದ ಗೆಲವು ಪಡೆದರೆ ಮಂದೆಯಡ ತಂಡವು ನಂಬಿಯಪಂಡ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು.
ಇಂಡಂಡ ತಂಡವು ಚೆಟ್ಟೀರ ತಂಡವನ್ನು 1-0 ಅಂತರದಿಂದ, ಮೀದೇರಿರ ತಂಡವು ಚೊಟ್ಟೆಯಂಡ ತಂಡವನ್ನು 1-0 ಅಂತರದಿಂದ, ಚೀಯಕಪೂವಂಡ ತಂಡವು ಅರಮನಮಾಡ ತಂಡವನ್ನು 2-0 ಅಂತರದಿಂದ, ಚಿಂಡಮಾಡ ತಂಡವು ಕೇಟೋಳಿರ ತಂಡವನ್ನು 2-1 ಅಂತರದಿಂದ ಸೋಲಿಸಿತು.ಉಳಿದಂತೆ ಮಾನಿಪಂಡ, ಮಾಪಣಮಾಡ, ಕುಂಚೆಟ್ಟಿರ, ಅಜ್ಜಿನಂಡ ತಂಡಗಳು ಗೆಲವು ಸಾಧಿಸಿದವು. ಕರವಂಡ ಕೋಳೆರ ವಿರುದ್ಧ ಟೈ ಬ್ರೇಕರ್ ನಲ್ಲಿ 4-3 ಅಂತರದ ಗೆಲವು ಸಾಧಿಸಿತು. ಪುಲ್ಲೇರ ಅಜ್ಜಿನಿಕಂಡ ತಂಡದ ವಿರುದ್ಧ 2-1 ಅಂತರದ ಗೆಲವು ಸಾಧಿಸಿತು.