ಕೊಡವ ಹಾಕಿ: ಕುಲ್ಲೇಟಿರ, ಐನಂಡ ಸೇರಿ ಒಂಬತ್ತು ತಂಡಗಳು ಮುಂದಿನ ಸುತ್ತಿಗೆ

| Published : Apr 22 2024, 02:18 AM IST / Updated: Apr 22 2024, 04:52 AM IST

ಕೊಡವ ಹಾಕಿ: ಕುಲ್ಲೇಟಿರ, ಐನಂಡ ಸೇರಿ ಒಂಬತ್ತು ತಂಡಗಳು ಮುಂದಿನ ಸುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ. ಚೆಪ್ಪುಡಿರ ತಂಡಕ್ಕೆ ಬಾಳೆಯಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು

ದುಗ್ಗಳ ಸದಾನಂದ

  ನಾಪೋಕ್ಲು :   ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ಒಂಬತ್ತು ತಂಡಗಳು ಮುನ್ನಡೆ ಸಾಧಿಸಿದವು. ಚೆಕ್ಕೆರ, ಪುದಿಯೋಕ್ಕಡ, ಚೇಂದಂಡ, ಕುಲ್ಲೇಟಿರ, ಐನಂಡ, ಕರಿನೆರವಂಡ, ಚೆಪ್ಪುಡಿರ, ಬೊವ್ವೇರಿಯಂಡ ಹಾಗೂ ಐ ಚೆಟ್ಟಿರ ತಂಡಗಳು ಗೆಲುವು ಸಾಧಿಸಿದವು.

ಚೆಪ್ಪುಡಿರ ತಂಡವು ಬಾಳೆಯಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಚೇನಂಡ ಮತ್ತು ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈಬ್ರೇಕರಿನಲ್ಲಿ ಚೆಕ್ಕೆರ ತಂಡವು 2-0 ಅಂತರದಿಂದ ಚೇರಂಡ ವಿರುದ್ಧ ಗೆಲುವು ಸಾಧಿಸಿತು. ಕಂಬೀರಂಡ ಮತ್ತು ಚೇಂದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಂದಂಡ 2-1 ಅಂತರದ ಮುನ್ನಡೆ ಸಾಧಿಸಿತು. ಕುಲ್ಲೇಟಿರ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ 5-2 ಅಂತರದಿಂದ ಮುಂದಿನ ಸುತ್ತು ಪ್ರವೇಶಿಸಿತು.

ಮಂಡೆಪಂಡ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐನಂಡ 3-2 ಅಂತರದಿಂದ ಗೆಲವು ಸಾಧಿಸಿತು. ಚೋಯಮಾದಂಡ ಮತ್ತು ಕರಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಿನೆರವಂಡ 3-0 ಅಂತರದ ಗೆಲವು ಸಾಧಿಸಿತು. ಬೋವ್ವೇರಿಯಂಡ ಚೇಂದಿರ ವಿರುದ್ಧ 2-1 ಅಂತರದಿಂದ ಮುನ್ನಡೆ ಸಾಧಿಸಿದರೆ ಐಚೆಟ್ಟಿರ ಕೇಲೇಟಿರ ವಿರುದ್ಧ 1-0 ಅಂತರದ ಜಯಗಳಿಸಿತು.