ವಿರಾಟ್‌ ಕೊಹ್ಲಿಯ ಮೌಲ್ಯ ಸ್ಟ್ರೈಕ್‌ರೇಟ್‌ಗಿಂತ ಹೆಚ್ಚು: ಬ್ರಿಯಾನ್ ಲಾರಾ

| Published : Apr 09 2024, 12:50 AM IST / Updated: Apr 09 2024, 03:18 AM IST

ವಿರಾಟ್‌ ಕೊಹ್ಲಿಯ ಮೌಲ್ಯ ಸ್ಟ್ರೈಕ್‌ರೇಟ್‌ಗಿಂತ ಹೆಚ್ಚು: ಬ್ರಿಯಾನ್ ಲಾರಾ
Share this Article
  • FB
  • TW
  • Linkdin
  • Email

ಸಾರಾಂಶ

ಆರಂಭಿಕ ಆಟಗಾರನ ಸ್ಟ್ರೈಕ್‌ರೇಟ್‌ 130-140 ಇರುವುದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ, ರೋಹಿತ್‌, ವಿರಾಟ್‌, ಶುಭ್‌ಮನ್‌ ಗಿಲ ವಿಶ್ವಕಪ್‌ನಲ್ಲಿ ಭಾರತದ ಅಗ್ರ-3 ಆಟಗಾರರಾಗಿರಬೇಕು ಎಂದು ಲಾರಾ ತಿಳಿಸಿದ್ದಾರೆ.

ಬೆಂಗಳೂರು: ವಿರಾಟ್‌ ಕೊಹ್ಲಿಯ ಮೌಲ್ಯ ಸ್ಟ್ರೈಕ್‌ರೇಟ್‌ಗಿಂತ ಮಿಗಿಲಾದದ್ದು. ಅವರು ಟಿ20 ವಿಶ್ವಕಪ್‌ ತಂಡದಲ್ಲಿ ಇರಬೇಕು ಎಂದು ವೆಸ್ಟ್ಇಂಡೀಸ್‌ ದಿಗ್ಗಜ ಬ್ರಿಯಾನ್ ಲಾರಾ ಹೇಳಿದ್ದಾರೆ. ಈ ಬಗ್ಗೆ ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಅವರು, ಸ್ಟ್ರೈಕ್‌ರೇಟ್‌ ಯಾವತ್ತೂ ಬ್ಯಾಟಿಂಗ್‌ ಕ್ರಮಾಂಕದ ಮೇಲೆ ಅವಲಂಬಿತವಾಗಿರುತ್ತದೆ. ಆರಂಭಿಕ ಆಟಗಾರನ ಸ್ಟ್ರೈಕ್‌ರೇಟ್‌ 130-140 ಇರುವುದು ತಪ್ಪಲ್ಲ ಎಂದಿದ್ದಾರೆ. ಅಲ್ಲದೆ, ರೋಹಿತ್‌, ವಿರಾಟ್‌, ಶುಭ್‌ಮನ್‌ ಗಿಲ ವಿಶ್ವಕಪ್‌ನಲ್ಲಿ ಭಾರತದ ಅಗ್ರ-3 ಆಟಗಾರರಾಗಿರಬೇಕು ಎಂದು ಲಾರಾ ತಿಳಿಸಿದ್ದಾರೆ.

ಇಂದಿನಿಂದ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌

ನಿಂಗ್‌ಬೊ(ಚೀನಾ): ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ಕೊನೆಯ ಪ್ರಮುಖ ಬಿಡಬ್ಲ್ಯುಎಫ್‌ ಟೂರ್ನಿಯಾಗಿರುವ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ ಮಂಗಳವಾರದಿಂದ ಆರಂಭಗೊಳ್ಳಲಿದೆ. ಭಾರತದ ತಾರಾ ಶಟ್ಲರ್‌ಗಳು ಸುಧಾರಿತ ಪ್ರದರ್ಶನ ನೀಡಿ ಪದಕ ಬರ ನೀಗಿಸುವ ಕಾತರದಲ್ಲಿದ್ದಾರೆ.ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌, ಎಚ್‌.ಎಸ್‌.ಪ್ರಣಯ್‌ ಕಿದಂಬಿ ಶ್ರೀಕಾಂತ್‌ ಪದಕ ನಿರೀಕ್ಷೆಯಲ್ಲಿದ್ದು, ಪ್ರಿಯಾನ್ಶು ರಾಜಾವತ್‌ ಕೂಡಾ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಜೊತೆ ಆಕರ್ಷಿ ಕಶ್ಯಪ್‌ ಭಾರತಕ್ಕೆ ಮೊದಲ ಚಿನ್ನ ತಂದುಕೊಡುವ ಕಾತರದಲ್ಲಿದ್ದಾರೆ.

ವಿಶ್ವ ನಂ.1, ಹಾಲಿ ಚಾಂಪಿಯನ್‌ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ಟೂರ್ನಿಯಲ್ಲಿ ಆಡುತ್ತಿಲ್ಲ. ಕೃಷ್ಣ ಪ್ರಸಾದ್‌-ಸಾಯಿ ಪ್ರತೀಕ್‌, ಅರ್ಜುನ್‌-ಧ್ರುವ್‌ ಕಪಿಲಾ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ತನಿಶಾ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ.

3ನೇ ಚಿನ್ನದ ಗುರಿ

6 ದಶಕಗಳ ಇತಿಹಾಸವಿರುವ ಟೂರ್ನಿಯಲ್ಲಿ ಭಾರತ ಈ ವರೆಗೆ ಕೇವಲ 2 ಚಿನ್ನ ಗೆದ್ದಿದೆ. ಪುರುಷರ ಸಿಂಗಲ್ಸ್‌ನಲ್ಲಿ 1965ರಲ್ಲಿ ದಿನೇಶ್‌ ಖನ್ನಾ, 2023ರಲ್ಲಿ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಚಾಂಪಿಯನ್‌ ಆಗಿದ್ದರು. ಉಳಿದಂತೆ 16 ಕಂಚಿನ ಪದಕಗಳೂ ಭಾರತಕ್ಕೆ ಲಭಿಸಿವೆ.