ಸಾರಾಂಶ
ಮುಂಬೈ: ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಸೋತು ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶುಕ್ರವಾರ ಕೋಲ್ಕತಾ ವಿರುದ್ಧ ಸೆಣಸಾಡಲಿದೆ. ತಂಡಕ್ಕೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದ್ದು, ಸೋತರೆ ರೇಸ್‌ನಿಂದ ಹೊರಬೀಳುವುದು ಖಚಿತ.
ಕೋಲ್ಕತಾ ಗೆದ್ದರೆ ಪ್ಲೇಆಫ್‌ಗೆ ಮತ್ತಷ್ಟು ಹತ್ತಿರವಾಗಲಿದೆ.ಮುಂಬೈಗೆ ಕೋಲ್ಕತಾ ಸೇರಿ ಒಟ್ಟು 4 ಪಂದ್ಯ ಬಾಕಿಯಿದೆ. ಎಲ್ಲರದಲ್ಲೂ ಗೆದ್ದರೂ ತಂಡ ಪ್ಲೇ-ಆಫ್‌ಗೇರುವ ಸಾಧ್ಯತೆ ಕಡಿಮೆ.
ಬೂಮ್ರಾ(14 ವಿಕೆಟ್), ಕೋಟ್ಜೀ(13 ವಿಕೆಟ್) ಹಾಗೂ ಯುವ ಬ್ಯಾಟರ್ ತಿಲಕ್ ವರ್ಮಾ (343 ರನ್) ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ತಂಡವಾಗಿ ಆಟವಾಡಲು ಮುಂಬೈ ವಿಫಲವಾಗಿದೆ. ಹೀಗಾಗಿ ಆಕ್ರಮಣಕಾರಿ ಆಟವಾಡುತ್ತಿರುವ ಕೋಲ್ಕತಾ ವಿರುದ್ಧ ಸುಧಾರಿತ ಪ್ರದರ್ಶನ ತೋರಿದರಷ್ಟೇ ಮುಂಬೈಗೆ ಗೆಲುವು ದಕ್ಕಲಿದೆ.
ಅತ್ತ ಕೆಕೆಆರ್ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ಗೇರುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಈ ಪಂದ್ಯದಲ್ಲೂ ಗೆದ್ದು ಅಗ್ರ-2ರಲ್ಲೇ ಉಳಿದುಕೊಳ್ಳುವುದು ತಂಡದ ಗುರಿ. ಆದರೆ ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿರುವುದು ಫ್ರಾಂಚೈಸಿಯ ತಲೆನೋವಿಗೆ ಕಾರಣವಾಗಿದೆ. ಪ್ರಮುಖವಾಗಿ ಸ್ಟಾರ್ಕ್ ತನ್ನ ಮೌಲ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ.
ಒಟ್ಟು ಮುಖಾಮುಖಿ: 32
ಕೆಕೆಆರ್: 09ಮುಂಬೈ: 23
ಸಂಭವನೀಯರ ಪಟ್ಟಿ
ಕೆಕೆಆರ್: ಸಾಲ್ಟ್, ನರೈನ್, ವೆಂಕಟೇಶ್, ಶ್ರೇಯಸ್(ನಾಯಕ), ರಸೆಲ್, ರಿಂಕು, ರಮನ್‌ದೀಪ್, ಸ್ಟಾರ್ಕ್, ವೈಭವ್, ಚೇತನ್, ವರುಣ್.ಮುಂಬೈ: ರೋಹಿತ್, ಇಶಾನ್, ತಿಲಕ್, ಸೂರ್ಯ, ಹಾರ್ದಿಕ್(ನಾಯಕ), ಟಿಮ್, ನೇಹಲ್, ನಬಿ, ಕೋಟ್ಜೀ, ಬೂಮ್ರಾ, ಚಾವ್ಲಾ.
ಪಂದ್ಯ: ಸಂಜೆ 7.30ಕ್ಕೆ