ಐಪಿಎಲ್‌ನಲ್ಲಿ ಮತ್ತೆ ರನ್ ಹೊಳೆ: 263 ರನ್‌ ಗಳಿಸಿದ್ದ ಆರ್‌ಸಿಬಿ ಹಿಂದಿಕ್ಕಿದ ಕೆಕೆಆರ್‌!

| Published : Apr 04 2024, 01:00 AM IST / Updated: Apr 04 2024, 04:52 AM IST

ಐಪಿಎಲ್‌ನಲ್ಲಿ ಮತ್ತೆ ರನ್ ಹೊಳೆ: 263 ರನ್‌ ಗಳಿಸಿದ್ದ ಆರ್‌ಸಿಬಿ ಹಿಂದಿಕ್ಕಿದ ಕೆಕೆಆರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತ. 11 ವರ್ಷಗಳ ಕಾಲ ಆರ್‌ಸಿಬಿ ತಂಡ ದಾಖಲೆಯಾಗಿ ಉಳಿಸಿದ್ದನ್ನು ಕೆಲವೇ ದಿನಗಳ ಅಂತರದಲ್ಲಿ 2 ತಂಡಗಳಿಂದ ಪತನ.

ವಿಶಾಖಪಟ್ಟಣಂ: ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ ರನ್‌ ಕಲೆಹಾಕಿದ ದಾಖಲೆಯನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ತನ್ನ ಹೆಸರಿಗೆ ಬರೆದುಕೊಂಡಿದೆ. 17ನೇ ಆವೃತ್ತಿ ಐಪಿಎಲ್‌ನ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ 7 ವಿಕೆಟ್‌ಗೆ 272 ರನ್‌ ಕಲೆಹಾಕಿತು.ಕಳೆದ ವಾರವಷ್ಟೆ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ 3 ವಿಕೆಟ್‌ಗೆ 277 ರನ್‌ ಕಲೆಹಾಕಿತ್ತು. 

ಆದರೆ ಅದನ್ನು ಮುರಿಯಲು ಕೋಲ್ಕತಾಗೆ ಸಾಧ್ಯವಾಗದಿದ್ದರೂ, ಆರ್‌ಸಿಬಿ ದಶಕದ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು ಪತನಗೊಳಿಸಿತು. 2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗೆ 263 ರನ್‌ ಗಳಿಸಿತ್ತು. ಆದರೆ 11 ವರ್ಷಗಳ ಕಾಲ ದಾಖಲೆಯಾಗಿ ಉಳಿಸಿದ್ದನ್ನು ಕೆಲವೇ ದಿನಗಳ ಅಂತರದಲ್ಲಿ 2 ತಂಡಗಳು ಪತನಗೊಳಿಸಿದವು.ಪಂದ್ಯದ ಆರಂಭದಲ್ಲೇ ಅಬ್ಬರಿಸತೊಡಗಿದ ನರೈನ್‌ 39 ಎಸೆತಗಳಲ್ಲಿ 85 ರನ್‌ ಸಿಡಿಸಿದರೆ, ಅಂಗ್‌ಕೃಷ್‌ ರಘುವನ್ಶಿ 27 ಎಸೆತದಲ್ಲಿ 54, ಆ್ಯಂಡ್ರೆ ರಸೆಲ್‌ 19 ಎಸೆತಗಳಲ್ಲಿ 41 ಹಾಗೂ ರಿಂಕು ಸಿಂಗ್‌ 8 ಎಸೆತಗಳಲ್ಲಿ 26 ರನ್‌ ಚಚ್ಚಿದರು.

ಲಖನೌ ವೇಗಿ ಮಾವಿ ಐಪಿಎಲ್‌ನಿಂದ ಔಟ್‌

ಲಖನೌ: ಲಖನೌ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಶಿವಂ ಮಾವಿ 17ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಪಕ್ಕೆಲುಬು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. 2023ರ ಆಗಸ್ಟ್‌ನಲ್ಲಿ ಮಾವಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಗಾಯಗೊಂಡಿದ್ದರು.