ಐಪಿಎಲ್‌: ಕುಲ್ದೀಪ್‌, ಜೇಕ್‌ ಅಬ್ಬರಕ್ಕೆ ಬೆಚ್ಚಿದ ಲಖನೌ, ಡೆಲ್ಲಿಗೆ ಭರ್ಜರಿ ಗೆಲುವು

| Published : Apr 13 2024, 01:04 AM IST / Updated: Apr 13 2024, 04:04 AM IST

ಐಪಿಎಲ್‌: ಕುಲ್ದೀಪ್‌, ಜೇಕ್‌ ಅಬ್ಬರಕ್ಕೆ ಬೆಚ್ಚಿದ ಲಖನೌ, ಡೆಲ್ಲಿಗೆ ಭರ್ಜರಿ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್‌ ಭರ್ಜರಿ ಗೆಲುವು. ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿ ಆರ್‌ಸಿಬಿಯನ್ನು ಕೊನೆ ಸ್ಥಾನಕ್ಕೆ ತಳ್ಳಿದ ಡೆಲ್ಲಿ 

ಲಖನೌ: ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ನಡುವಿನ ಪಂದ್ಯ ಕೆಲ ಆಕರ್ಷಕ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಕುಲ್ದೀಪ್‌ ಯಾದವ್‌ ಸ್ಪಿನ್‌ ಜಾದೂ ಪ್ರದರ್ಶಿಸಿದರೆ, ಯುವ ಬ್ಯಾಟರ್‌ಗಳಾದ ಲಖನೌದ ಆಯುಷ್‌ ಬದೋನಿ ಹಾಗೂ ಡೆಲ್ಲಿಯ ಜೇಕ್‌ ಫ್ರೇಸರ್‌-ಮೆಕ್‌ಗರ್ಕ್‌ ಸ್ಫೋಟಕ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಡೆಲ್ಲಿ ಈ ಆವೃತ್ತಿಯಲ್ಲಿ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಆರ್‌ಸಿಬಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಮೊದಲು ಬ್ಯಾಟ್‌ ಮಾಡಿದ ಲಖನೌ ಲೆಕ್ಕಾಚಾರವನ್ನು ಕುಲ್ದೀಪ್‌ ಬುಡಮೇಲು ಮಾಡಿದರು. ಅಪಾಯಕಾರಿ ಬ್ಯಾಟರ್‌ಗಳಾದ ಸ್ಟೋಯ್ನಿಸ್‌, ಪೂರನ್‌ ಹಾಗೂ ರಾಹುಲ್‌ರ ವಿಕೆಟ್‌ ಕಬಳಿಸಿದ ಕುಲ್ದೀಪ್‌, 4 ಓವರಲ್ಲಿ ಒಂದೂ ಬೌಂಡರಿ, ಸಿಕ್ಸರ್‌ ಬಿಟ್ಟುಕೊಡದೆ ಕೇವಲ 20 ರನ್‌ಗೆ 3 ವಿಕೆಟ್‌ ಪಡೆದರು.

94 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ಲಖನೌಗೆ ಆಯುಷ್‌ ಬದೋನಿ ಹಾಗೂ ಅರ್ಷದ್‌ ಖಾನ್‌ ಆಸರೆಯಾದರು. ಇವರಿಬ್ಬರು ಮುರಿಯದ 8ನೇ ವಿಕೆಟ್‌ಗೆ 73 ರನ್‌ ಜೊತೆಯಾಟವಾಡಿ, ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ಕಾರಣರಾದರು.

ಲಖನೌ 160ಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾಗ ಸೋತ ಉದಾಹರಣೆಯೇ ಇರಲಿಲ್ಲ. ಹೀಗಾಗಿ, ಮತ್ತೊಮ್ಮೆ ತಮ್ಮ ಬೌಲರ್‌ಗಳ ಮೇಲೆ ನಾಯಕ ರಾಹುಲ್‌ ವಿಶ್ವಾಸವಿರಿಸಿದ್ದರು.

ಆರಂಭದಲ್ಲೇ ವಾರ್ನರ್‌ (8) ವಿಕೆಟ್‌ ಪಡೆದರೂ, ಪೃಥ್ವಿ ಶಾ (32) ಹಾಗೂ ಚೊಚ್ಚಲ ಐಪಿಎಲ್‌ ಪಂದ್ಯವಾಡಿದ ಆಸ್ಟ್ರೇಲಿಯಾದ 22 ವರ್ಷದ ಜೇಕ್‌ ಫ್ರೇಸರ್‌ ಮೆಕ್‌ಗರ್ಕ್‌ರ ಅಬ್ಬರವನ್ನು ತಡೆಯಲಾಗಲಿಲ್ಲ.ಶಾ ಔಟಾದ ಬಳಿಕ ಕ್ರೀಸ್‌ಗಿಳಿದ ರಿಷಭ್‌ ಪಂತ್‌ 24 ಎಸೆತದಲ್ಲಿ 41 ರನ್‌ ಚಚ್ಚಿದರು. ಜೇಕ್‌ 35 ಎಸೆತದಲ್ಲಿ 5 ಸಿಕ್ಸರ್‌, 2 ಬೌಂಡರಿಯೊಂದಿಗೆ 55 ರನ್‌ ಸಿಡಿಸಿ ತಂಡವನ್ನು ಜಯದ ಹೊಸ್ತಿಲಿಗೆ ಕೊಂಡೊಯ್ದರು. ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಶಾಯ್‌ ಹೋಪ್‌, ಇನ್ನೂ 11 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಲಖನೌ 20 ಓವರಲ್ಲಿ 167/7 (ಬದೋನಿ 55*, ರಾಹುಲ್‌ 39, ಕುಲ್ದೀಪ್‌ 3-20), ಡೆಲ್ಲಿ 18.1 ಓವರಲ್ಲಿ 170/4 (ಜೇಕ್‌ 55, ಪಂತ್‌ 41, ಬಿಷ್ಣೋಯ್‌ 2-25) ಪಂದ್ಯಶ್ರೇಷ್ಠ: ಕುಲ್ದೀಪ್‌ ಯಾದವ್‌.01ನೇ ಬಾರಿ

ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ 160+ ರನ್‌ ರಕ್ಷಿಸಿಕೊಳ್ಳಲು ಇದೇ ಮೊದಲ ಬಾರಿಗೆ ವಿಫಲವಾಯಿತು. ಇದಕ್ಕೂ ಮುನ್ನ 13 ಪಂದ್ಯ ಗೆದ್ದಿತ್ತು.73 ರನ್‌ಐಪಿಎಲ್‌ನಲ್ಲಿ 8ನೇ ವಿಕೆಟ್‌ಗೆ ಗರಿಷ್ಠ ರನ್‌ ಜೊತೆಯಾಟದ ದಾಖಲೆಯನ್ನು ಬದೋನಿ-ಅರ್ಷದ್‌ ಬರೆದರು. ಇವರಿಬ್ಬರು 73 ರನ್‌ ಸೇರಿಸಿದರು. 2014ರಲ್ಲಿ ಫೌಕ್ನರ್‌-ಹಾಡ್ಜ್‌ 69 ರನ್‌ ಗಳಿಸಿದ್ದು ದಾಖಲೆ ಎನಿಸಿತ್ತು.