ಮಲೇಷ್ಯಾ ಓಪನ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಜೋಡಿ

| Published : Jan 14 2024, 01:34 AM IST / Updated: Jan 14 2024, 02:18 PM IST

ಮಲೇಷ್ಯಾ ಓಪನ್‌: ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಜೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಷ್ಯಾ ಓಪನ್‌ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಪಂದ್ಯಾವಳಿ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಫೈನಲ್‌ ತಲುಪಿದ್ದು, ಪ್ರಶಸ್ತಿಗಾಗಿ ಇಂದು ಲಿಯಾಂಗ್‌ ವೈಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧ ಸೆಣಸಲಿದ್ದಾರೆ.

ಕೌಲಾ ಲಂಪುರ: ಮಲೇಷ್ಯಾ ಓಪನ್‌ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಪಂದ್ಯಾವಳಿ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಫೈನಲ್‌ ತಲುಪಿದ್ದಾರೆ. ಶನಿವಾರ ನಡೆದ ಸೆಮಿ ಫೈನಲ್‌ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರಾದ ಕೊರಿಯಾದ ಸಿಯೊ ಸೆಯುಂಗ್‌-ಕಾಂಗ್‌ ಮಿನ್‌ ವಿರುದ್ಧ 21-18, 22-20ರಲ್ಲಿ ಗೆಲುವು ಸಾಧಿಸಿದರು. 

ಎರಡನೇ ಸೂಪರ್‌ 1000 ಸಮೀಪದಲ್ಲಿರುವ ಜೋಡಿಯು ಕಳೆದ ವರ್ಷ ಇಂಡೋನೆಷ್ಯಾ ಓಪನ್‌ ಪ್ರಶಸ್ತಿ ಗೆದ್ದಿತ್ತು. ಆರಂಭಿಕ ಗೇಮ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ ಭಾರತೀಯ ಜೋಡಿಯು 9-5ರ ಮುನ್ನಡೆ ಸಾಧಿಸಿತು. 

ನಂತರ ತಮ್ಮ ಅಂಕಗಳನ್ನು 12-13ಕ್ಕೆ ಹೆಚ್ಚಿಸಿಕೊಂಡ ಕೊರಿಯನ್‌ ಜೋಡಿಯು ಭಾರತೀಯ ಜೋಡಿಗೆ ಶರಣಾಯಿತು. ಪಂದ್ಯ 3ನೇ ಗೇಮ್‌ಗೆ ಹೋಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ವರಿಗೆ ಅಚ್ಚರಿ ನೀಡಿದ ಸಾತ್ವಿಕ್‌-ಚಿರಾಗ್. ಸತತ 6 ಗೇಮ್‌ ಪಾಯಿಂಟ್‌ಗಳನ್ನು ಉಳಿಸಿಕೊಂಡು, ಸತತ 8 ಪಾಯಿಂಟ್‌ ಗಳಿಕೆ ಮೂಲಕ 2ನೇ ಗೇಮ್‌ನಲ್ಲೇ ಭಾರತೀಯ ಜೋಡಿ ಪಂದ್ಯ ಮುಗಿಸಿತು.

ಕಳೆದ ವರ್ಷ ಸ್ವಿಸ್‌, ಇಂಡೋನೆಷ್ಯಾ, ಕೊರಿಯಾ ಓಪನ್‌ ಸೇರಿ ಮೂರು ಬ್ಯಾಡ್ಮಿಂಟನ್‌ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದ ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ ಚೀನಾ ಮಾಸ್ಟರ್ಸ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿತ್ತು. ಪ್ರಸಕ್ತ ವರ್ಷವನ್ನು ಪ್ರಶಸ್ತಿಯೊಂದಿಗೆ ಆರಂಭಿಸುವ ನಿರೀಕ್ಷೆಯಲ್ಲಿದ್ದಾರೆ.

ವಿಶ್ವ ನಂ.1 ಜೋಡಿ ಲಿಯಾಂಗ್‌ ವೈಕೆಂಗ್‌ ಮತ್ತು ವಾಂಗ್‌ ಚಾಂಗ್‌ ಅವರು ಪೈನಲ್‌ನಲ್ಲಿ ಎದುರಾಗಲಿದ್ದಾರೆ. ಚೀನಾದ ಈ ಜೋಡಿ ಜಪಾನ್‌, ಇಂಡಿಯಾ, ಥೈಲ್ಯಾಂಡ್‌, ಚೀನಾ ಓಪನ್‌ ಹಾಗೂ ಚೀನಾ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದುಕೊಂಡಿದೆ.