ಬೆಂಗಳೂರು : ಮಯಾಂಕ್‌, ಮನೀಶ್‌, ವೃಂದಾ, ವಿದ್ವತ್‌ಗೆ ಕೆಎಸ್‌ಸಿಎ ವಾರ್ಷಿಕ ಅವಾರ್ಡ್‌

| Published : Dec 29 2024, 01:20 AM IST / Updated: Dec 29 2024, 04:00 AM IST

Cricket ball and stumps

ಸಾರಾಂಶ

ದ್ರಾವಿಡ್‌ ಪುತ್ರ ಅನ್ವಯ್‌ಗೂ ವಾರ್ಷಿಕ ಪ್ರಶಸ್ತಿ. ಮಯಾಂಕ್‌ ಸೇರಿ ಪ್ರಮುಖರು ವಿಜಯ್‌ ಹಜಾರೆ ಟೂರ್ನಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾದರು.

 ಬೆಂಗಳೂರು  : ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ ಸೇರಿದಂತೆ ಪ್ರಮುಖರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಮಯಾಂಕ್‌ ಸೇರಿ ಪ್ರಮುಖರು ವಿಜಯ್‌ ಹಜಾರೆ ಟೂರ್ನಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರಾದರು. ಮಯಾಂಕ್‌ 2022-23ರ ರಣಜಿ, 2023-24ರ ಮುಷ್ತಾಕ್‌ ಅಲಿ ಟಿ20ಯ ಗರಿಷ್ಠ ಸ್ಕೋರರ್‌ ಪ್ರಶಸ್ತಿ, ಮನೀಶ್‌ 2022-23ರ ಮುಷ್ತಾಕ್‌ ಅಲಿ ಟಿ20ಯ ಗರಿಷ್ಠ ಸ್ಕೋರರ್‌, ದೇವದತ್‌ ಪಡಿಕ್ಕಲ್‌ 2023-24ರ ವಿಜಯ್‌ ಹಜಾರೆ, ರಣಜಿಯ ಗರಿಷ್ಠ ಸ್ಕೋರರ್‌ ಪ್ರಶಸ್ತಿ ಪಡೆದರು. ವೃಂದಾ ದಿನೇಶ್‌ ಮಹಿಳಾ ವಿಭಾಗದಲ್ಲಿ 4 ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ರಾಹುಲ್‌ ದ್ರಾವಿಡ್‌ ಪುತ್ರ ಅನ್ವಯ್ ಅಂಡರ್‌-14, ವಿಜಯ್‌ ಮರ್ಚಂಟ್‌ ಟೂರ್ನಿಗಳ ಗರಿಷ್ಠ ರನ್‌ ಸರದಾರ ಪ್ರಶಸ್ತಿ ಜಯಿಸಿದರು. ನಿಕಿನ್‌ ಜೋಸ್, ಕೌಶಿಕ್‌, ವಿದ್ವತ್ ಕಾವೇರಪ್ಪ, ವೈಶಾಖ್‌, ಗೌತಮ್‌ ಕೂಡಾ ವಿವಿಧ ಪ್ರಶಸ್ತಿ ಗೆದ್ದರು.

1ನೇ ಟೆಸ್ಟ್‌: ಆಫ್ಘನ್‌ ತಿರುಗೇಟು, 425/2ಬುಲವಾಯೊ: ಮೊದಲ ಟೆಸ್ಟ್‌ನಲ್ಲಿ ಜಿಂಬಾಬ್ವೆ ತಂಡಕ್ಕೆ ಅಫ್ಘಾನಿಸ್ತಾನ ತಿರುಗೇಟು ನೀಡಿದೆ. ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ 586 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಆಫ್ಘನ್‌, 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 425 ರನ್‌ ಕಲೆಹಾಕಿದ್ದಯ, ಇನ್ನು 161 ರನ್‌ ಹಿನ್ನಡೆಯಲ್ಲಿದೆ. 64ಕ್ಕೆ 2 ವಿಕೆಟ್ ಕಳೆದುಕೊಂಡ ಬಳಿಕ ಮುರಿಯದ 3ನೇ ವಿಕೆಟ್‌ಗೆ ರಹ್ಮತ್‌ ಶಾ ಹಾಗೂ ಹಶ್ಮತುಲ್ಲಾಹ್‌ ಶಾಹಿದಿ 361 ರನ್‌ ಜೊತೆಯಾಟವಾಡಿದರು. ರಹ್ಮತ್‌ 231, ಶಾಹಿದಿ 141 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.