ಸಾರಾಂಶ
ವೇಗಿ ಮೊಹಮದ್ ಶಮಿ ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಹೆಚ್ಚು. .
ನವದೆಹಲಿ: ಜ.25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತದ ಪ್ರಮುಖ ವೇಗಿ ಮೊಹಮದ್ ಶಮಿ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
33 ವರ್ಷದ ಶಮಿ ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರು ಇನ್ನಷ್ಟೇ ಎನ್‌ಸಿಎಗೆ ತೆರಳಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದೆ. ಈವರೆಗೂ ಬೌಲಿಂಗ್ ಅಭ್ಯಾಸ ಆರಂಭಿಸ ಕಾರಣ ಸರಣಿಯ ಆರಂಭಿಕ 2 ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.
ಸರಣಿ ತವರಿನಲ್ಲಿ ನಡೆಯಲಿದ್ದು, ಬೂಮ್ರಾ, ಸಿರಾಜ್ ಕೂಡಾ ಆಯ್ಕೆಗೆ ಲಭ್ಯರಿದ್ದಾರೆ. ಅಲ್ಲದೆ ಸ್ಪಿನ್ನರ್‌ಗಳೂ ಪ್ರಮುಖ ಪಾತ್ರ ವಹಿಸಲಿರುವ ಕಾರಣ ಶಮಿಯನ್ನು ಆಡಿಸುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.
ಸೂರ್ಯಕುಮಾರ್‌ಗೆ ಜರ್ಮನಿಯಲ್ಲಿ ಸರ್ಜರಿ
ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ವಿಶ್ವ ನಂ.1 ಟಿ20 ಬ್ಯಾಟರ್, ಭಾರತದ ಸೂರ್ಯಕುಮಾರ್ ಯಾದವ್ ಶೀಘ್ರದಲ್ಲೇ ಜರ್ಮನಿಗೆ ತೆರಳಲಿದ್ದಾರೆ. ಹೀಗಾಗಿ ಅವರು 17ನೇ ಆವೃತ್ತಿ ಐಪಿಎಲ್‌ನ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿಂದ ತಿಳಿದುಬಂದಿದೆ.
ಸೂರ್ಯ ಕೆಲ ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಜರ್ಮನಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಳಿಕ ಅವರು 8-9 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಅಲ್ಲದೆ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೂ ಅವರು ಅಲಭ್ಯರಾಗುವ ಸಾಧ್ಯತೆ ಇದೆ.