ಸಾರಾಂಶ
ಆರ್‌ಸಿಬಿಗೆ ಇದು ಟೂರ್ನಿಯಲ್ಲಿ 3ನೇ ಸೋಲು. ಗುಜರಾತ್ ವಿರುದ್ಧ ಗೆಲ್ಲುವ ಮೂಲಕ ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗುವ ನಿರೀಕ್ಷೆಯಲ್ಲಿದ್ದ ಸ್ಮೃತಿ ಮಂಧನಾ ಬಳಗದ ಕನಸು ನನಸಾಗಲಿಲ್ಲ. ಅಂದ ಹಾಗೆ ಗುಜರಾತ್‌ಗೆ ಇದು ಟೂರ್ನಿಯಲ್ಲಿ ಮೊದಲ ಜಯ.
ನವದೆಹಲಿ: 2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನಲ್ಲಿ ಆರ್‌ಸಿಬಿ 3ನೇ ಸೋಲು ಕಂಡಿದೆ. ಬುಧವಾರ ಸ್ಮೃತಿ ಮಂಧನಾ ನಾಯಕತ್ವದ ಬೆಂಗಳೂರು ತಂಡಕ್ಕೆ ಗುಜರಾತ್ ಜೈಂಟ್ಸ್ ವಿರುದ್ಧ 19 ರನ್ ಸೋಲು ಎದುರಾಯಿತು. ಸತತ 4 ಪಂದ್ಯ ಸೋತಿದ್ದ ಗುಜರಾತ್ ಕೊನೆಗೂ ಮೊದಲ ಗೆಲುವಿನ ಸಿಹಿ ಅನುಭವಿಸಿತು. ಆರ್‌ಸಿಬಿ 6 ಪಂದ್ಯಗಳನ್ನಾಡಿದ್ದು, ಇನ್ನೆರಡು ಪಂದ್ಯ ಬಾಕಿ ಇದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ 5 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಬರೋಬ್ಬರಿ 199 ರನ್. ಮೊದಲ ವಿಕೆಟ್‌ಗೆ ನಾಯಕಿ ಬೆಥ್ ಮೂನಿ ಹಾಗೂ ಲಾರಾ ವೊಲ್ವಾರ್ಟ್ 13 ಓವರಲ್ಲಿ 140 ರನ್ ಜೊತೆಯಾಟವಾಡಿದರು. ವೊಲ್ವಾರ್ಟ್ 45 ಎಸೆತಗಳಲ್ಲಿ 76 ರನ್ ಸಿಡಿಸಿದರೆ, ಮೂನಿ 51 ಎಸೆತಗಳಲ್ಲಿ ಔಟಾಗದೆ 85 ರನ್ ಚಚ್ಚಿದರು.ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರಲ್ಲಿ 00 ವಿಕೆಟ್ ಕಳೆದುಕೊಂಡು 000 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಜಾರ್ಜಿಯಾ ವೇರ್‌ಹ್ಯಾಮ್(22 ಎಸೆತದಲ್ಲಿ 48), ರಿಚಾ ಘೋಷ್(21 ಎಸೆತಗಳಲ್ಲಿ 30) ಕೊನೆಯಲ್ಲಿ ಹೋರಾಡಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.ಸ್ಕೋರ್: ಗುಜರಾತ್ 20 ಓವರಲ್ಲಿ 5 ವಿಕೆಟ್‌ಗೆ 199 (ಮೂನಿ 85, ವೊಲ್ವಾರ್ಟ್ 76, ಮಾಲಿನ್ಯುಕ್ಷ್ 1-32), ಆರ್‌ಸಿಬಿ 20 ಓವರಲ್ಲಿ 8 ವಿಕೆಟ್‌ಗೆ 180 (ವೇರ್‌ಹ್ಯಾಮ್ 48, ರಿಚಾ 30, ಗಾರ್ಡ್ನರ್ 2-23)ಇಂದಿನ ಪಂದ್ಯ: ಮುಂಬೈ ಇಂಡಿಯನ್ಸ್-ಯುಪಿ ವಾರಿಯರ್ಸ್