ಸಾರಾಂಶ
ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೊಮೋ ಈಗಾಗಲೇ ಸೂಪರ್ ಹಿಟ್ ಆಗಿದ್ದು, ಧೋನಿಯ ಡಬಲ್ ಆ್ಯಕ್ಟಿಂಗ್‌ಗೆ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈ: ಐಪಿಎಲ್‌ನ 2024ರ ಸೀಸನ್‌ಗಾಗಿ ಜನರ ಕಾತುರತೆ ಹೆಚ್ಚುತ್ತಿದ್ದಂತೆಯೇ, ಜಿಯೋ ಸಿನಿಮಾ ಹೊಸ ಪ್ರೊಮೋವೊಂದನ್ನು ಬಿಡುಗಡೆ ಮಾಡಿದ್ದು, 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಎಂ.ಎಸ್.ಧೋನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೊಮೋದಲ್ಲಿ ಧೋನಿ ಅಜ್ಜ ಮತ್ತು ಮೊಮ್ಮಗನ ವಿಶಿಷ್ಟ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಪ್ರೊಮೋ ಒಂದು ಹಾಸ್ಯಮಯ ಚಿತ್ರವಾಗಿದ್ದು, ಇದು ಮೊಮ್ಮಗನು ತನ್ನ ಫೋನ್ ಪರದೆಯಲ್ಲಿ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ದೃಶ್ಯದೊಂದಿಗೆ ಆರಂಭಗೊಳ್ಳುತ್ತದೆ, ನಂತರ ಅಜ್ಜ ಕೂಡ ತನ್ನ ಫೋನ್‌ನಲ್ಲಿ ಅದೇ ಪಂದ್ಯವನ್ನು ನೋಡುವುದರಲ್ಲಿ ಆಳವಾಗಿ ತಲ್ಲೀನನಾಗಿರುವುದನ್ನು ತೋರಿಸುತ್ತದೆ.ನಂತರ ಹಠಾತ್ ತಾತನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆಂಬ್ಯುಲೆನ್ಸ್ ಅನ್ನು ಕರೆಸಲಾಗುತ್ತದೆ. ಆಂಬ್ಯುಲೆನ್ಸ್ ಆಸ್ಪತ್ರೆ ಕಡೆಗೆ ಸಾಗಿದಾಗ ದಾರಿಯಲ್ಲಿ ಅದರಲ್ಲಿನ ಮೆಡಿಕಲ್ ಅಟೆಂಡೆಂಟ್ ಕೂಡ ತನ್ನ ಫೋನ್‌ನಲ್ಲಿ ಪಂದ್ಯ ವೀಕ್ಷಿಸುತ್ತಿರುವುದು ಕಾಣಿಸುತ್ತದೆ.
ತಾತ ಮತ್ತು ಮೊಮ್ಮಗ ಹಾಸ್ಯಮಯವಾಗಿ ವ್ಯಾನ್‌ನ ಹಿಂಭಾಗದಲ್ಲಿ ಆರಾಮದಾಯಕವಾಗಿರುತ್ತಾರೆ. ನಂತರ ತಾತ ಒಮ್ಮೆ ತೇಗುತ್ತಾನೆ ಮತ್ತು ಅದು ಎದೆನೋವು ಅಲ್ಲ ಕೇವಲ ಗ್ಯಾಸ್ ಸಮಸ್ಯೆ ಎಂದು ಹೇಳುವಲ್ಲಿ ಕಥೆಯು ತಿರುವು ಪಡೆದುಕೊಳ್ಳುತ್ತದೆ. ಅಷ್ಟರಲ್ಲಿ ಪಂದ್ಯದಲ್ಲಿ ಬ್ಯಾಟರ್ ಒಬ್ಬ ಸಿಕ್ಸರ್ ಹೊಡೆಯುತ್ತಾರೆ ಮತ್ತು ಇದು ಮೂವರನ್ನು ಹುರಿದುಂಬಿಸುತ್ತದೆ. ಚಿತ್ರ ಇಲ್ಲಿಗೆ ಅಂತ್ಯಗೊಳ್ಳುತ್ತದೆ. ಈ ಪ್ರೊಮೋ ಈಗಾಗಲೇ ಸೂಪರ್ ಹಿಟ್ ಆಗಿದ್ದು, ಧೋನಿಯ ಡಬಲ್ ಆ್ಯಕ್ಟಿಂಗ್‌ಗೆ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.