ಟೆಸ್ಟ್‌ನಲ್ಲಿ 2ನೇ ಅತಿವೇಗದ ತ್ರಿಶತಕ ಸಿಡಿಸಿದ ಮುಲ್ಡರ್‌: ಸೆಹ್ವಾಗ್‌ ದಾಖಲೆ ಭದ್ರ!

| N/A | Published : Jul 07 2025, 11:48 PM IST / Updated: Jul 08 2025, 08:22 AM IST

ಟೆಸ್ಟ್‌ನಲ್ಲಿ 2ನೇ ಅತಿವೇಗದ ತ್ರಿಶತಕ ಸಿಡಿಸಿದ ಮುಲ್ಡರ್‌: ಸೆಹ್ವಾಗ್‌ ದಾಖಲೆ ಭದ್ರ!
Share this Article
  • FB
  • TW
  • Linkdin
  • Email

ಸಾರಾಂಶ

ಜಿಂಬಾಬ್ವೆ ಟೆಸ್ಟ್‌ನಲ್ಲಿ ಆಫ್ರಿಕಾ ಬ್ಯಾಟರ್‌ ಸಾಧನೆ. 297 ಎಸೆತಕ್ಕೆ 300 ರನ್‌, ಒಟ್ಟು ಔಟಾಗದೆ 367 ರನ್‌. ಇನ್ನಿಂಗ್ಸ್‌ ಡಿಕ್ಲೇರ್ ಘೋಷಿಸಿ ಅಚ್ಚರಿ.

ಬುಲವಾಯೊ: ಜಿಂಬಾಬ್ವೆ ವಿರುದ್ಧ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಯಕ ತ್ರಿಶತಕ ಬಾರಿಸಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 297 ಎಸೆತಕ್ಕೆ 300 ರನ್‌ ಪೂರ್ಣಗೊಳಿಸಿದ ಅವರು ಟೆಸ್ಟ್‌ ಇತಿಹಾಸದಲ್ಲೇ 2ನೇ ಅತಿ ವೇಗದ ತ್ರಿಶತಕದ ದಾಖಲೆ ಬರೆದರು. 

ಭಾರತದ ವಿರೇಂದ್ರ ಸೆಹ್ವಾಗ್‌ 2008ರಲ್ಲಿ ದ.ಆಫ್ರಿಕಾ ವಿರುದ್ಧ 278 ಎಸೆತಕ್ಕೆ 300ರ ಗಡಿ ದಾಟಿದ್ದು ಈಗಲೂ ದಾಖಲೆ.ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮುಲ್ಡರ್‌ 334 ಎಸೆತಕ್ಕೆ 367 ರನ್‌ ಗಳಿಸಿದರು. 400 ರನ್‌ ಗಳಿಸುವ ನಿರೀಕ್ಷೆಯಿತ್ತಾದರೂ, ಸ್ವತಃ ನಾಯಕರಾಗಿದ್ದ ಅವರು ಅಚ್ಚರಿ ಎಂಬಂತೆ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿದರು. 

ಈ ಮೂಲಕ 2004ರಲ್ಲಿ ವಿಂಡೀಸ್‌ನ ಬ್ರಿಯಾನ್‌ ಲಾರಾ ಗಳಿಸಿದದ 400 ರನ್‌ಗಳ ವಿಶ್ವದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡರು. ಮುಲ್ಡರ್‌ ಟೆಸ್ಟ್‌ ಇತಿಹಾಸದಲ್ಲೇ 5ನೇ ಗರಿಷ್ಠ ರನ್‌ ಸರದಾರ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ಪರ ಅವರದ್ದು ಹೊಸ ದಾಖಲೆ. ಹಾಶಿಂ ಆಮ್ಲ 311 ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.ಮುಲ್ಡರ್‌ ಅಬ್ಬರದಿಂದಾಗಿ ದ.ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 625 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿದರೆ, ಜಿಂಬಾಬ್ವೆ 170ಕ್ಕೆ ಆಲೌಟಾಗಿ ಫಾಲೋಆನ್‌ಗೆ ತುತ್ತಾಯಿತು.

ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್‌

ಆಟಗಾರರನ್‌ತಂಡಎದುರಾಳಿವರ್ಷ

ಬ್ರಿಯಾನ್‌ ಲಾರಾ400*ವಿಂಡೀಸ್‌ಇಂಗ್ಲೆಂಡ್‌2004

ಮ್ಯಾಥ್ಯೂ ಹೇಡನ್‌380ಆಸ್ಟ್ರೇಲಿಯಾಜಿಂಬಾಬ್ವೆ2003

ಬ್ರಿಯಾನ್‌ ಲಾರಾ375ವಿಂಡೀಸ್‌ಇಂಗ್ಲೆಂಡ್‌1994

ಜಯವರ್ಧನೆ374ಶ್ರೀಲಂಕಾದ.ಆಫ್ರಿಕಾ2006

ಮುಲ್ಡರ್‌367*ದ.ಆಫ್ರಿಕಾಜಿಂಬಾಬ್ವೆ2025

Read more Articles on