ಸಿಎಸ್‌ಕೆ vs ಸನ್‌ ರೈಸರ್ಸ್‌ ನಡುವೆ ಇಂದು ಬಿಗ್‌ ಫೈಟ್‌

| Published : Apr 05 2024, 01:05 AM IST / Updated: Apr 05 2024, 04:04 AM IST

ಸಾರಾಂಶ

ಸ್ಫೋಟಕ ಬ್ಯಾಟರ್‌ಗಳ ನಡುವಿನ ಕದನದಲ್ಲಿ ಗೆಲ್ಲುವವರ್ಯಾರು?. ಮೊದಲೆರಡು ಪಂದ್ಯ ಗೆದ್ದಿದ್ದ ಚೆನ್ನೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿತ್ತು. ಹೈದ್ರಾಬಾದ್‌ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮಂಕಾಗಿತ್ತು.

ಹೈದರಾಬಾದ್‌: ಈ ಬಾರಿ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಮೂಲಕವೇ ಹೆಚ್ಚು ಗಮನ ಸೆಳೆದಿರುವ 2 ತಂಡಗಳಾದ, ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಕೊನೆ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಜಯದ ಹಳಿಗೆ ಮರಳುವ ಕಾತರಲ್ಲಿದೆ.

ಮೊದಲೆರಡು ಪಂದ್ಯ ಗೆದ್ದಿದ್ದ ಚೆನ್ನೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿತ್ತು. ತಂಡದ ಬ್ಯಾಟರ್‌ಗಳು ಅಭೂತಪೂರ್ವ ಲಯದಲ್ಲಿದ್ದು, 8ನೇ ಕ್ರಮಾಂಕದವರೆಗೂ ತಜ್ಞ ಬ್ಯಾಟರ್‌ಗಳಿರುವುದು ತಂಡದ ಪ್ಲಸ್‌ ಪಾಯಿಂಟ್‌. ರಚಿನ್‌ ರವೀಂದ್ರ, ನಾಯಕ ಋತುರಾಜ್‌, ಶಿವಂ ದುಬೆ, ಡ್ಯಾರಿಲ್‌ ಮಿಚೆಲ್‌ ಹೈದ್ರಾಬಾದ್ ವಿರುದ್ಧ ಅಬ್ಬರಿಸಬೇಕಿದೆ. 

ಮುಸ್ತಾಫಿಜುರ್‌ ತವರಿಗೆ ಮರಳಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಬೌಲರ್‌ ತಂಡಕ್ಕೆ ಅಗತ್ಯವಿದೆ.ಇನ್ನು, ಹೈದ್ರಾಬಾದ್‌ ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳ ಮೇಲೆ ಸವಾರಿ ನಡೆಸಿದೆ. ಆದರೆ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮಂಕಾಗಿದ್ದ ಬ್ಯಾಟಿಂಗ್‌ ಪಡೆ ಈ ಬಾರಿ ಚೆನ್ನೈನ ನಿಖರ ದಾಳಿಯನ್ನು ಹಿಮ್ಮೆಟ್ಟಿಸಲಿದೆಯೇ ಎಂಬ ಕುತೂಹಲವಿದೆ. ಕ್ಲಾಸೆನ್‌, ಅಭಿಷೆಕ್‌, ಮಾರ್ಕ್‌ರಮ್‌, ಹೆಡ್‌ ಅಬ್ಬರಿಸಿದರೆ ಚೆನ್ನೈ ಸೋಲು ಕಟ್ಟಿಟ್ಟಬುತ್ತಿ.

ಒಟ್ಟು ಮುಖಾಮುಖಿ: 19ಚೆನ್ನೈ: 14ಹೈದ್ರಾಬಾದ್: 05

ಸಂಭವನೀಯ ಆಟಗಾರರ ಪಟ್ಟಿಚೆನ್ನೈ: ಋತುರಾಜ್‌(ನಾಯಕ), ರಚಿನ್‌ ರವೀಂದ್ರ, ರಹಾನೆ, ಡ್ಯಾರಿಲ್‌, ಜಡೇಜಾ, ಸಮೀರ್‌ ರಿಜ್ವಿ, ಧೋನಿ, ದೀಪಕ್‌, ತುಷಾರ್‌, ಪತಿರನ, ತೀಕ್ಷಣ.ಹೈದ್ರಾಬಾದ್: ಮಯಾಂಕ್‌, ಹೆಡ್‌, ಅಭಿಷೇಕ್‌, ಮಾರ್ಕ್‌ರಮ್‌, ಕ್ಲಾಸೆನ್‌, ಸಮದ್‌, ಶಾಬಾಜ್‌, ಕಮಿನ್ಸ್‌(ನಾಯಕ), ಭುವನೇಶ್ವರ್‌, ಮಾರ್ಕಂಡೆ, ಉನಾದ್ಕಟ್‌.

ಪಂದ್ಯ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.