ಆಸ್ಟ್ರೇಲಿಯನ್‌ ಓಪನ್‌: ಮಾಜಿ ಚಾಂಪಿಯನ್‌ ಒಸಾಕಗೆ ಮೊದಲ ಸುತ್ತಲ್ಲೇ ಶಾಕ್‌!

| Published : Jan 16 2024, 01:46 AM IST

ಆಸ್ಟ್ರೇಲಿಯನ್‌ ಓಪನ್‌: ಮಾಜಿ ಚಾಂಪಿಯನ್‌ ಒಸಾಕಗೆ ಮೊದಲ ಸುತ್ತಲ್ಲೇ ಶಾಕ್‌!
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕ ಸೋಲು ಅಣುಭವಿಸಿದ್ದಾರೆ. 15 ತಿಂಗಳ ಬಳಿಕ ಗ್ರ್ಯಾನ್‌ ಸ್ಲಾಂ ಟೆನಿಸ್‌ಗೆ ಕಮ್‌ಬ್ಯಾಕ್‌ ಮಾಡಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮೆಲ್ಬರ್ನ್‌: 15 ತಿಂಗಳ ಬಳಿಕ ಗ್ರ್ಯಾನ್‌ ಸ್ಲಾಂ ಟೆನಿಸ್‌ಗೆ ಕಮ್‌ಬ್ಯಾಕ್‌ ಮಾಡಿದ ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಲ್ಲೇ ಸೋಲು ಅನುಭವಿಸಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ 2 ಬಾರಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿರುವ ಒಸಾಕ ಅವರು, 16ನೇ ಶ್ರೇಯಾಂಕಿತೆ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಪರಾಭವಗೊಂಡರು. ಈ ಮೂಲಕ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು.

ಇದೇ ವೇಳೆ ಯುಎಸ್‌ ಓಪನ್‌ ಚಾಂಪಿಯನ್‌ ಅಮೆರಿಕದ ಕೊಕೊ ಗಾಫ್‌ ತಮ್ಮ ಮೊದಲ ಸುತ್ತಿನ ಪಂದ್ಯವನ್ನು ಕೇವಲ 60 ನಿಮಿಷಗಳಲ್ಲಿ ಗೆದ್ದರು. ಸ್ಲೋವಾಕಿಯಾದ ಆ್ಯನಾ ಕ್ಯಾರೊಲಿನಾ ವಿರುದ್ಧ 6-3, 6-0ಯಲ್ಲಿ ಸುಲಭ ಜಯ ಸಾಧಿಸಿದರು. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕಿತ, 2021 ಹಾಗೂ 2022ರ ರನ್ನರ್‌-ಅಪ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಸಹ ಎದುರಾಳಿಯನ್ನು ಮಣಿಸಿ 2ನೇ ಸುತ್ತಿಗೇರಿದರು.