ರಾಷ್ಟ್ರೀಯ ಅಥ್ಲೆಟಿಕ್ಸ್‌ : ಕರ್ನಾಟಕದ ವಂದನಾಗೆ 20 ಕಿ.ಮೀ. ವೇಗ ನಡಿಗೆಯಲ್ಲಿ ಕಂಚು

| Published : Aug 31 2024, 01:36 AM IST / Updated: Aug 31 2024, 04:10 AM IST

ಸಾರಾಂಶ

ಸರ್ವಿಸಸ್‌ನ ಗುಲ್ವೀರ್‌ ಸಿಂಗ್‌ ಪುರುಷರ 5000 ಮೀ. ರೇಸ್‌ನಲ್ಲಿ 13 ನಿಮಿಷ 54.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಬೆಂಗಳೂರು: ಶುಕ್ರವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಂಡ 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪದಕ ಖಾತೆ ತೆರೆದಿದೆ. ಕೂಟದ ಮೊದಲ ದಿನ ಮಹಿಳೆಯರ 20 ಕಿ.ಮೀ. ವೇಗ ನಡಿಗೆ ಸ್ಪರ್ಧೆಯಲ್ಲಿ ವಂದನಾ 1 ಗಂಟೆ 39 ನಿಮಿಷ 41 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದರು.

 ಹರ್ಯಾಣದ ರವಿನಾ(1 ಗಂಟೆ 35.40 ನಿಮಿಷ) ಹಾಗೂ ರೈಲ್ವೇಸ್‌ ತಂಡದ ಮುನಿತಾ ಪ್ರಜಾಪತಿ (1 ಗಂಟೆ 37:40 ನಿಮಿಷ) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು. ಇದೇ ವೇಳೆ ಸರ್ವಿಸಸ್‌ನ ಗುಲ್ವೀರ್‌ ಸಿಂಗ್‌ ಪುರುಷರ 5000 ಮೀ. ರೇಸ್‌ನಲ್ಲಿ 13 ನಿಮಿಷ 54.70 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.

ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌: ಹೈಜಂಪ್‌ ಫೈನಲ್‌ಗೆ ಪೂಜಾ

ಲಿಮಾ (ಪೆರು): ಭಾರತದ ಪೂಜಾ ಸಿಂಗ್‌ ಇಲ್ಲಿ ನಡೆಯುತ್ತಿರುವ ಅಂಡರ್‌-20 ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ ಹೈಜಂಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. 17 ವರ್ಷದ ಪೂಜಾ, 1.83 ಮೀ. ಎತ್ತರಕ್ಕೆ ಜಿಗಿಯುವ ಮೂಲಕ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆ (1.82 ಮೀ.)ಯನ್ನು ಉತ್ತಮಪಡಿಸಿಕೊಂಡರು. ಒಟ್ಟಾರೆ 9ನೇ ಸ್ಥಾನದೊಂದಿಗೆ ಪೂಜಾ ಫೈನಲ್‌ಗೇರಿದರು. ಶನಿವಾರ ರಾತ್ರಿ ಫೈನಲ್‌ ನಡೆಯಲಿದೆ.