ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಕನ್ನಡಿಗ, ಐಎಎಸ್‌ ಅಧಿಕಾರಿ ಸುಹಾಸ್‌ ಈಗ ವಿಶ್ವ ನಂ.1. ಎಸ್‌ಎಲ್‌4 ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ.

ನವದೆಹಲಿ: ಕನ್ನಡಿಗ, ಉ.ಪ್ರದೇಶ ಕೇಡರ್‌ ಐಎಎಸ್‌ ಅಧಿಕಾರಿ ಸುಹಾಸ್‌ ಎಲ್‌.ವೈ ಅವರು ಪ್ಯಾರಾ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನ ಎಸ್‌ಎಲ್‌4 ವಿಭಾಗದಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ್ದಾರೆ.

ಮಂಗಳವಾರ ಹೊಸದಾಗಿ ಪ್ರಕಟಗೊಂಡ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸುಹಾಸ್‌ ಒಂದು ಸ್ಥಾನ ಏರಿಕೆ ಕಂಡು ಬಹಳ ಸಮಯದಿಂದ ಅಗ್ರಸ್ಥಾನದಲ್ಲಿದ್ದ ಫ್ರಾನ್ಸ್‌ನ ಲುಕಾಸ್‌ ಮಜುರ್‌ರನ್ನು ಹಿಂದಿಕ್ಕಿದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್‌ ಅವರು, ಈ ವರ್ಷ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.

ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 2 ಬಾರಿ ಸ್ವರ್ಣ ಪದಕ ಗೆದ್ದಿರುವ ಅವರು, 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.