ಸಾರಾಂಶ
ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್‌ಖಾನ್ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.
ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಭಾರತದ ತಾರಾ ಬಾಕ್ಸರ್ ನಿಶಾಂತ್ ದೇವ್ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಪುರುಷರ 71 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಿಶಾಂತ್, ಜಾರ್ಜಿಯಾದ ಮ್ಯಾಡೀವ್ ಎಸ್ಕೆರ್‌ಖಾನ್ ವಿರುದ್ಧ 5-0 ವಿರುದ್ಧ ಗೆಲುವು ಸಾಧಿಸಿದರು. ನಿಶಾಂತ್‌ರ ಆಕ್ರಮಣಕಾರಿ ಆಟದ ಮುಂದೆ ನಿರುತ್ತರವಾದ ಮ್ಯಾಡೀವ್ ಯಾವುದೇ ಪ್ರತಿರೋಧ ತೋರದೆ ಸೋಲೊಪ್ಪಿಕೊಂಡರು. ಈ ಗೆಲುವಿನೊಂದಿಗೆ ನಿಶಾಂತ್ ಒಲಿಂಪಿಕ್ಸ್‌ಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ.ಇದೇ ವೇಳೆ ಪುರುಷರ 92 ಕೆ.ಜಿ. ವಿಭಾಗದಲ್ಲಿ ಸಂಜೀತ್ ಮೊದಲ ಸುತ್ತಿನಲ್ಲೇ ಕಜಕಸ್ತಾನದ ಐಬೆಕ್ ವಿರುದ್ಧ 0-5 ಅಂತರದಲ್ಲಿ ಸೋತು ಹೊರಬಿದ್ದರು.ಭಾರತದಿಂದ ಈಗಾಗಲೇ ನಿಖಾತ್ ಜರೀನ್(50 ಕೆ.ಜಿ.), ಪ್ರೀತಿ(54 ಕೆ.ಜಿ.), ಪರ್ವೀನ್ ಹೂಡಾ(57 ಕೆ.ಜಿ.) ಹಾಗೂ ಲವ್ಲೀನಾ ಬೊರ್ಗೊಹೈನ್(75 ಕೆ.ಜಿ.) ಏಷ್ಯನ್ ಗೇಮ್ಸ್ ಗೆಲುವಿನ ಮೂಲಕ ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ.