ಸ್ವಿಸ್‌ನ ಪ್ರಸಿದ್ಧ ಒಮೆಗಾ ವಾಚ್‌ ಕಂಪೆನಿಗೆ ನೀರಜ್‌ ಚೋಪ್ರಾ ರಾಯಭಾರಿ

| Published : May 10 2024, 01:36 AM IST / Updated: May 10 2024, 04:15 AM IST

ಸ್ವಿಸ್‌ನ ಪ್ರಸಿದ್ಧ ಒಮೆಗಾ ವಾಚ್‌ ಕಂಪೆನಿಗೆ ನೀರಜ್‌ ಚೋಪ್ರಾ ರಾಯಭಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಐಕಾನಿಕ್ ಬ್ರ್ಯಾಂಡ್‌ ಆಗಿರುವ ಒಮೆಗಾದ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ ಎಂದು ನೀರಜ್‌ ಚೋಪ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನ ವಿಜೇತ, ಭಾರತದ ಸ್ಟಾರ್‌ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಸ್ವಿಜರ್‌ಲೆಂಡ್‌ನ ಜನಪ್ರಿಯ ವಾಚ್‌ ತಯಾರಿಕಾ ಸಂಸ್ಥೆ ಒಮೆಗಾದ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಒಮೆಗಾ ಸಂಸ್ಥೆಯು 1932ರಿಂದಲೂ ಬಹುತೇಕ ಎಲ್ಲಾ ಒಲಿಂಪಿಕ್ಸ್‌ಗಳಲ್ಲೂ ಅಧಿಕೃತ ಸಮಯ ಪಾಲಕರಾಗಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಇದೇ ಸಂಸ್ಥೆ ಸಮಯ ಪಾಲಕರಾಗಿರಲಿದೆ.

ಈ ಕುರಿತು ಮಾತನಾಡಿದ ಚೋಪ್ರಾ, ಒಲಂಪಿಕ್ ಗೇಮ್ಸ್‌ನಲ್ಲಿ ಸಮಯ ಪಾಲನೆಯಲ್ಲಿ ದೊಡ್ಡ ಪಾತ್ರ ವಹಿಸುವ ಐಕಾನಿಕ್ ಬ್ರ್ಯಾಂಡ್‌ ಆಗಿರುವ ಒಮೆಗಾದ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ. ನಾನು ಒಮೆಗಾದೊಂದಿಗೆ ಉತ್ತಮ ಸಹಯೋಗ, ಮುಂಬರುವ ಪ್ರದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.

ಇಂದು ದೋಹಾ ಡೈಮಂಡ್‌ ಲೀಗ್‌: ನೀರಜ್‌, ಜೆನಾ ಸ್ಪರ್ಧೆ 

ದೋಹಾ(ಕತಾರ್): 2024ರ ಡೈಮಂಡ್‌ ಲೀಗ್‌ನ ಮೊದಲ ಚರಣ ದೋಹಾದಲ್ಲಿ ಶುಕ್ರವಾರ ನಡೆಯಲಿದ್ದು, ಭಾರತದ ತಾರಾ ಜಾವೆಲಿನ್‌ ಥ್ರೋ ಪಟುಗಳಾದ ನೀರಜ್‌ ಚೋಪ್ರಾ ಹಾಗೂ ಕಿಶೋರ್‌ ಜೆನಾ ಕಣಕ್ಕಿಳಿಯಲಿದ್ದಾರೆ. 2022ರ ಡೈಮಂಡ್‌ ಲೀಗ್‌ ಚಾಂಪಿಯನ್‌ ನೀರಜ್‌ 2ನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದು, ಕಿಶೋರ್‌ ಇದೇ ಮೊದಲ ಬಾರಿ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. 

ನೀರಜ್‌ 2022ರಲ್ಲಿ 3 ಚರಣಗಳಲ್ಲಿ ಗೆದ್ದಿದ್ದು, ಚಾಂಪಿಯನ್ಸ್‌ ಟ್ರೋಫಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಸದ್ಯ ಇಬ್ಬರೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಮಹತ್ವದ ಕ್ರೀಡಾಕೂಟಕ್ಕೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.