ಸಾರಾಂಶ
ಇಟಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಕೂಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಬಾಕ್ಸರ್ ಒಬ್ಬ, ತಮ್ಮ ದೇಶದವರೇ ಆದ ಮಹಿಳಾ ಬಾಕ್ಸರ್ ಒಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ
ಕರಾಚಿ: ಇಟಲಿಯಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಕೂಟದಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನದ ಬಾಕ್ಸರ್ ಒಬ್ಬ, ತಮ್ಮ ದೇಶದವರೇ ಆದ ಮಹಿಳಾ ಬಾಕ್ಸರ್ ಒಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಲಾರಾ ಇಕ್ರಮ್ ಎನ್ನುವ ಬಾಕ್ಸರ್ ಅಭ್ಯಾಸಕ್ಕೆ ತೆರಳಿದ್ದಾಗ ಝೊಯೆಬ್ ರಶೀದ್ ಎನ್ನುವ ಬಾಕ್ಸರ್ ಒಬ್ಬ ಹೋಟೆಲ್ ಸಿಬ್ಬಂದಿಯಿಂದ ಲಾರಾ ಅವರ ರೂಂ ಕೀ ಪಡೆದು, ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿದ್ದಾನೆ. ಆತನಿಗಾಗಿ ಸ್ಥಳೀಯ ಪೊಲೀಸರು ಹುಡುಕಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಪಾಕ್‌ನ ಜುಡೋ ಪಟು ಸಾವು
ಕರಾಚಿ: ಪಾಕಿಸ್ತಾನದ ಯುವ ಮಹಿಳಾ ಜುಡೋ ಪಟು ಫಿಜಾ ಶೇರ್ ಅಲಿ, ಪಂದ್ಯದ ವೇಳೆ ಎದುರಾಳಿ ತಲೆಗೆ ಒದ್ದ ಕಾರಣ ಅಂಕಣದಲ್ಲೇ ಸಾವನ್ನಪ್ಪಿದ ದುರ್ಘಟನೆ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದಿದೆ. ಸ್ಥಳೀಯ ಟೂರ್ನಿಯ 44 ಕೆ.ಜಿ. ವಿಭಾಗದ ಪಾಲ್ಗೊಂಡಿದ್ದ 20 ವರ್ಷದ ಫಿಜಾ, ಪಂದ್ಯದ ವೇಳೆಯೇ ಕುಸಿದು ಬಿದ್ದಿದ್ದಾರೆ.