ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ನದೀಂಗೆ ಎಮ್ಮೆ ಉಡುಗೊರೆ!

| Published : Aug 13 2024, 12:55 AM IST / Updated: Aug 13 2024, 04:10 AM IST

ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ನದೀಂಗೆ ಎಮ್ಮೆ ಉಡುಗೊರೆ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ನವಾಜ್‌, ತಮ್ಮ ಗ್ರಾಮದ ಗೌರವದ ಸಂಕೇತವಾಗಿ ತಾವು ಸಾಕಿದ್ದ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿಸಿದ್ದಾರೆ.

ಕರಾಚಿ: ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ನದೀಂ ಅರ್ಶದ್‌ಗೆ ಅವರ ಮಾವ ಮುಹಮ್ಮದ್‌ ನವಾಜ್‌ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ನವಾಜ್‌, ತಮ್ಮ ಗ್ರಾಮದ ಗೌರವದ ಸಂಕೇತವಾಗಿ ತಾವು ಸಾಕಿದ್ದ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿಸಿದ್ದಾರೆ.

 ‘ನದೀಂ ನಮ್ಮ ಮನೆಗೆ ಬಂದಾಗಲೆಲ್ಲಾ ಯಾವುದರ ಬಗ್ಗೆಯೂ ಅತೃಪ್ತಿ ತೋರದೆ, ಇದ್ದುದರಲ್ಲಿಯೇ ಖುಷಿ ಪಡುತ್ತಾರೆ. ಅವರ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದಿದ್ದಾರೆ. ಪಾಕ್‌ನ ಪಂಜಾಬ್ ಪ್ರಾಂತ್ಯದ ಖಾನೆವಾಲ್‌ ಗ್ರಾಮದ ನದೀಂ, ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲಿ ಭಾರತದ ನೀರಜ್‌ ಚೋಪ್ರಾರನ್ನು ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದರು.

ಒಲಿಂಪಿಕ್ ಸ್ಟೇಡಿಯಂಗೆ ನುಗ್ಗಿ ಫ್ರಾನ್ಸ್‌ ಅಧ್ಯಕ್ಷರ ಜೊತೆ ಜಾರ್ವೋ ಸೆಲ್ಫಿ!

ಪ್ಯಾರಿಸ್‌: ಭಾರತದ ಕ್ರಿಕೆಟ್‌ ಪಂದ್ಯಗಳ ವೇಳೆ ಮೈದಾನಕ್ಕೆ ನುಗ್ಗುತ್ತಿದ್ದ ಇಂಗ್ಲೆಂಡ್‌ನ ಡೇನಿಯಲ್‌ ಜಾರ್ವೀಸ್‌(ಜಾರ್ವೊ 69) ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ನಡೆದ ಕ್ರೀಡಾಂಗಣಕ್ಕೂ ನುಗ್ಗಿ ಸುದ್ದಿಯಾಗಿದ್ದಾನೆ. ಅಲ್ಲದೆ, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ ಸೆಲ್ಫಿಯನ್ನೂ ಕ್ಲಿಕ್ಕಿಸಿದ್ದು, ವಿಡಿಯೋ, ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಬ್ರಿಟನ್‌ ಅಥ್ಲೀಟ್‌ಗಳಂತೆ ಬಟ್ಟೆ ಧರಿಸಿ ಕ್ರೀಡಾಂಗಣಕ್ಕೆ ಬಂದಿದ್ದಾಗಿ ಬರೆದುಕೊಂಡಿದ್ದಾನೆ. 2021ರ ಭಾರತ-ಇಂಗ್ಲೆಂಡ್‌ ಟೆಸ್ಟ್‌ ವೇಳೆ ಪಿಚ್‌ಗೆ ನುಗ್ಗಿದ್ದ ಜಾರ್ವೋ, ಬಳಿಕ 2023ರ ಏಕದಿನ ವಿಶ್ವಕಪ್‌, ರಗ್ಬಿ ವಿಶ್ವಕಪ್‌ ಮಾತ್ರವಲ್ಲದೇ ಕೆಲ ಫುಟ್ಬಾಲ್‌ ಪಂದ್ಯಗಳ ವೇಳೆ ಸಹ ಮೈದಾನಕ್ಕೆ ನುಗ್ಗಿ ಸುದ್ದಿಯಾಗಿದ್ದ.