ಸಾರಾಂಶ
ವಿಶಾಖಪಟ್ಟಣಂ: ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ 24 ಲಕ್ಷ ರು. ದಂಡ ವಿಧಿಸಲಾಗಿದೆ. ತಂಡದ ಇತರ ಆಟಗಾರರು ಕೂಡಾ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ಕಟ್ಟಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಪಂತ್‌ಗೆ ₹12 ಲಕ್ಷ ದಂಡ ವಿಧಿಸಲಾಗಿತ್ತು. ಸತತ 2ನೇ ಬಾರಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ದಂಡದ ಮೊತ್ತ ದುಪ್ಪಟ್ಟಾಗಿದೆ.
2022ರ ಡಿಸೆಂಬರ್‌ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ಬಳಿಕ ರಿಷಭ್ ಪಂತ್ ಬರೋಬ್ಬರಿ 15 ತಿಂಗಳು ನಂತರ ಇತ್ತೀಚೆಗಷ್ಟೇ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದರು. ಅವರು ಸದ್ಯ ಉತ್ತಮ ಲಯದಲ್ಲಿದ್ದು, ಚೆನ್ನೈ ಮತ್ತು ಕೆಕೆಆರ್ ವಿರುದ್ಧದ ಪಂದ್ಯಗಳಲ್ಲಿ ಫಿಫ್ಟಿ ಬಾರಿಸಿದ್ದಾರೆ.
ಅನ್ಮೋಲ್, ತಾನ್ಯಾ ಸೇರಿ ಐವರು ಕ್ವಾರ್ಟರ್ ಪ್ರವೇಶ
ಅಸ್ತಾನ(ಕಜಕಸ್ತಾನ): ಯುವ ಶಟ್ಲರ್ ಅಲ್ಮೋಲ್ ಖಾರ್ಬ್ ಸೇರಿದಂತೆ ಭಾರತದ ಐವರು ಕಜಕಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬ್ಯಾಡ್ಮಿಂಟನ್ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಿನ್ನ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ 17ರ ಅನ್ಮೋಲ್, ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಯುಎಇಯ ನೂರಾನಿ ಅಝ್ಝಹ್ರಾ ವಿರುದ್ಧ ವಿರುದ್ಧ 21-11, 21-7ರಲ್ಲಿ ಜಯಗಳಿಸಿದರು. ತಾನ್ಯಾ ಹೇಮಂತ್, ದೇವಿಕಾ ಸಿಹಾಗ್, ಅನುಪಮಾ ಉಪಾಧ್ಯಾಯ ಹಾಗ ಇಶಾರಾಣಿ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದರು. ತಾನ್ಯಾಗೆ ಕ್ವಾರ್ಟರ್‌ನಲ್ಲಿ ಇಶಾರಾಣಿ ಸವಾಲು ಎದುರಾಗಲಿದೆ.