ಜಿಂಬಾಬ್ವೆ ವಿರುದ್ಧ ಟಿ20 ಸರಣಿ: ಭಾರತಕ್ಕೆ ಶುಭ್‌ಮನ್‌ ಗಿಲ್‌ ನಾಯಕ

| Published : Jun 25 2024, 12:34 AM IST / Updated: Jun 25 2024, 04:15 AM IST

ಸಾರಾಂಶ

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರನ್ನು ಬಿಸಿಸಿಐ ಮುಂದಿನ ತಿಂಗಳ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ.

ನವದೆಹಲಿ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಿಂಚಿದ ಆಟಗಾರರನ್ನು ಬಿಸಿಸಿಐ ಮುಂದಿನ ತಿಂಗಳ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌, ಕುಲ್ದೀಪ್‌ ಯಾದವ್‌ ಸೇರಿ ಬಹುತೇಕರಿಗೆ ವಿಶ್ರಾಂತಿ ನೀಡಲಾಗಿದೆ. 

ಇದೇ ಮೊದಲ ಬಾರಿಗೆ ರಿಯಾನ್‌ ಪರಾಗ್‌, ಅಭಿಷೇಕ್‌ ಶರ್ಮಾ, ನಿತೀಶ್‌ ರೆಡ್ಡಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಜೈಸ್ವಾಲ್‌, ಸ್ಯಾಮ್ಸನ್‌, ಜುರೆಲ್‌, ರಿಂಕು ಸಿಂಗ್‌ ಸೇರಿ ಇನ್ನೂ ಕೆಲವು ಅನುಭವಿ ಆಟಗಾರರೂ ತಂಡದಲ್ಲಿದ್ದಾರೆ. 

ತಂಡ: ಶುಭ್‌ಮನ್‌ ಗಿಲ್‌(ನಾಯಕ), ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್‌, ಅಭಿಷೇಕ್‌ ಶರ್ಮಾ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಧೃವ್‌ ಜುರೆಲ್‌, ನಿತೀಶ್‌ ರೆಡ್ಡಿ, ರಿಯಾನ್‌ ಪರಾಗ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯ್‌, ಆವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ತುಷಾರ್‌ ದೇಶಪಾಂಡೆ. 

ಅವಕಾಶ ಸಿಗದ್ದಕ್ಕೆ ವರುಣ್ ಬೇಸರ!

2021ರ ಟಿ20 ವಿಶ್ವಕಪ್‌ ತಂಡದಲ್ಲಿದ್ದ, 2024ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಲೆಗ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ತಮ್ಮನ್ನು ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆ ಮಾಡದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಳಲು ತೋಡಿಕೊಂಡಿರುವ ವರುಣ್‌, ‘ನಾನೂ ಸಹ ಪಿಆರ್‌ (ಪ್ರಚಾರ) ಸಂಸ್ಥೆಯೊಂದರ ನೆರವು ಪಡೆಯಬೇಕಿತ್ತು’ ಎಂದು ಬರೆದುಕೊಂಡಿದ್ದಾರೆ.