ಸಾರಾಂಶ
ಬೆಂಗಳೂರಲ್ಲಿ ನಡೆಯಲಿರುವ ಪರಿಕ್ರಮ ಫುಟ್ಬಾಲ್ ಲೀಗ್. ಕರ್ನಾಟಕ ಸೇರಿ ವಿವಿಧ ರಾಜ್ಯಗಳ 16 ತಂಡಗಳು ಭಾಗಿ. 3 ದಿನಗಳ ನಡೆಯಲಿರುವ ಪಂದ್ಯಾವಳಿ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಲಂ ಮಕ್ಕಳಿಗೆ ಶಿಕ್ಷಣ ಹಾಗೂ ಶೋಷಿತ ಮಕ್ಕಳ ಮೇಲಿನ ಅಸಮಾನತೆ ನಿವಾರಣೆಗೆ ಕಾರ್ಯಾಚರಿಸುತ್ತಿರುವ ಪರಿಕ್ರಮ ಹ್ಯೂಮ್ಯಾನಿಟಿ ಫೌಂಡೇಶನ್ ಈ ಬಾರಿಯೂ ಫುಟ್ಬಾಲ್ ಲೀಗ್ ಆಯೋಜನಗೆ ಸಜ್ಜಾಗಿದೆ. 12ನೇ ಆವೃತ್ತಿ ಅಂಡರ್-16 ಲೀಗ್ ನ.28ರಿಂದ 30ರ ವರೆಗೆ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಮಂಗಳವಾರ ಲೀಗ್ ಆಯೋಜನೆ ಸಂಬಂಧ ಪರಿಕ್ರಮ ಫೌಂಡೇಶನ್ ಸುದ್ದಿಗೋಷ್ಠಿ ನಡೆಸಿ, ''''ಸಮಾನತೆ ಕಪ್'''' ಹಾಗೂ ಜೆರ್ಸಿ ಅನಾವರಣಗೊಳಿಸಿತು. ಈ ಬಾರಿ ಲೀಗ್‌ನಲ್ಲಿ ಕರ್ನಾಟಕ, ಅಸ್ಸಾಂ, ಗೋವಾ ಹಾಗೂ ರಾಜಸ್ಥಾನದ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿವೆ. ಗೆದ್ದ ತಂಡಗಳು ಕ್ವಾರ್ಟರ್ ಫೈನಲ್‌ಗೇರಲಿದ್ದು, ಸೋತ ತಂಡಗಳು ಪ್ಲೇಟ್ ಕ್ವಾರ್ಟರ್‌ನಲ್ಲಿ ಆಡಲಿವೆ.ಸುದ್ದಿಗೋಷ್ಠಿಯಲ್ಲಿ ಪರಿಕ್ರಮ ಫೌಂಡೇಶನ್ ಸಂಸ್ಥಾಪಕಿ ಶುಕ್ಲಾ ಬೋಸ್, ರಾಜ್ಯ ಫುಟ್ಬಾಲ್ ಸಂಸ್ಥೆ ಸಹ ಕಾರ್ಯದರ್ಶಿ ಅಸ್ಲಂ ಖಾನ್ ಉಪಸ್ಥಿತರಿದ್ದರು.