ಪ್ಯಾರಿಸ್‌ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹41.6 ಲಕ್ಷ ಬಹುಮಾನ!

| Published : Apr 11 2024, 12:46 AM IST / Updated: Apr 11 2024, 04:17 AM IST

ಪ್ಯಾರಿಸ್‌ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹41.6 ಲಕ್ಷ ಬಹುಮಾನ!
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆಯಿಂದ ಐತಿಹಾಸಿಕ ಘೋಷಣೆ. ಪ್ಯಾರಿಸ್‌ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್‌ಗಳಿಗೆ 50000 ಅಮೆರಿಕನ್‌ ಡಾಲರ್‌ ಬಹುಮಾನ. ಇದೇ ಮೊದಲ ಬಾರಿಗೆ ಅಥ್ಲೀಟ್‌ಗಳಿಗೆ ನಗದು ಬಹುಮಾನ ಸಿಗಲಿದೆ.

ಮೊನಾಕೊ: ಈ ವರ್ಷ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್‌ಗಳಿಗೆ 50000 ಅಮೆರಿಕನ್‌ ಡಾಲರ್‌ (ಅಂದಾಜು 41.6 ಲಕ್ಷ ರು.) ಬಹುಮಾನ ನೀಡುವುದಾಗಿ, ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ಘೋಷಿಸಿದೆ.ಇದೊಂದು ಐತಿಹಾಸಿಕ ಘೋಷಣೆಯಾಗಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಳುಗಳಿಗೆ ನಗದು ಬಹುಮಾನ ಸಿಗಲಿದೆ. ಉದಾಹರಣೆಗೆ ಭಾರತದ ನೀರಜ್‌ ಚೋಪ್ರಾ, ಪ್ಯಾರಿಸ್‌ನಲ್ಲೂ ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದರೆ ಅವರಿಗೆ 50000 ಅಮೆರಿಕನ್‌ ಡಾಲರ್‌ ಬಹುಮಾನ ದೊರೆಯಲಿದೆ.

2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಜೊತೆ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆಲ್ಲುವ ಅಥ್ಲೀಟ್‌ಗಳಿಗೂ ನಗದು ಬಹುಮಾನ ನೀಡುವುದಾಗಿ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ತಿಳಿಸಿದೆ.ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಶನ್‌ವೊಂದು ಒಲಿಂಪಿಕ್ಸ್‌ ಪದಕಕ್ಕೆ ಪ್ರತ್ಯೇಕವಾಗಿ ನಗದು ಬಹುಮಾನ ಘೋಷಿಸಿರುವುದು ಇದೇ ಮೊದಲು. ಈ ಘೋಷಣೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಸಿ) ಇನ್ನೂ ಒಪ್ಪಿಗೆ ಸೂಚಿಸಬೇಕಿದೆ.