ಪ್ಲೇ-ಆಫ್ಸ್‌ ಹಂತಕ್ಕೆ ತಲುಪಿದ ಪ್ರೊ ಕಬಡ್ಡಿ ಲೀಗ್‌ : ಇಂದು ಯುಪಿ vs ಜೈಪುರ, ಪಾಟ್ನಾ vs ಮುಂಬಾ

| Published : Dec 26 2024, 01:00 AM IST / Updated: Dec 26 2024, 04:03 AM IST

ಪ್ಲೇ-ಆಫ್ಸ್‌ ಹಂತಕ್ಕೆ ತಲುಪಿದ ಪ್ರೊ ಕಬಡ್ಡಿ ಲೀಗ್‌ : ಇಂದು ಯುಪಿ vs ಜೈಪುರ, ಪಾಟ್ನಾ vs ಮುಂಬಾ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲೇ-ಆಫ್ಸ್‌ ಹಂತಕ್ಕೆ ತಲುಪಿದ ಪ್ರೊ ಕಬಡ್ಡಿ ಲೀಗ್‌. ಇಂದು 2 ಎಲಿಮಿನೇಟರ್‌ ಪಂದ್ಯಗಳು. ಗೆಲ್ಲುವ ತಂಡಗಳು ಸೆಮಿಫೈನಲ್‌ಗೆ, ಸೋಲುವ ತಂಡಗಳು ಮನೆಗೆ.

ಪುಣೆ: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಪ್ಲೇ-ಆಫ್ಸ್‌ ಹಂತ ತಲುಪಿದ್ದು, ಗುರುವಾರ 2 ಎಲಿಮಿನೇಟರ್‌ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್‌ನಲ್ಲಿ ಯು.ಪಿ.ಯೋಧಾಸ್‌ ಹಾಗೂ ಜೈಪುರ ಪಿಂಕ್‌ ಪ್ಯಾಂಥರ್ಸ್‌, 2ನೇ ಎಲಿಮಿನೇಟರ್‌ನಲ್ಲಿ ಪಾಟ್ನಾ ಪೈರೇಟ್ಸ್‌ ಹಾಗೂ ಯು-ಮುಂಬಾ ತಂಡಗಳು ಸೆಣಸಲಿವೆ.

ಈ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದ್ದು, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದ ಹರ್ಯಾಣ ಸ್ಟೀಲರ್ಸ್‌ ಹಾಗೂ ದಬಾಂಗ್‌ ಡೆಲ್ಲಿ ತಂಡಗಳು ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದ್ದು, ತಮ್ಮ ಎದುರಾಳಿಗಳಿಗಾಗಿ ಕಾಯುತ್ತಿವೆ.

ಪ್ಲೇ-ಆಫ್ಸ್‌ ಪ್ರವೇಶಿಸಿರುವ 6 ತಂಡಗಳ ಪೈಕಿ ಹರ್ಯಾಣ ಹಾಗೂ ಯು.ಪಿ.ಯೋಧಾಸ್‌ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಪಾಟ್ನಾ ಪೈರೇಟ್ಸ್‌ 3 ಬಾರಿ ಚಾಂಪಿಯನ್‌ ಆದರೆ, ದಬಾಂಗ್‌ ಡೆಲ್ಲಿ 8ನೇ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿತ್ತು. ಉದ್ಘಾಟನಾ ಆವೃತ್ತಿ ಹಾಗೂ 9ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪ್ರಶಸ್ತಿ ಎತ್ತಿಹಿಡಿದಿತ್ತು. ಇನ್ನು ಯು ಮುಂಬಾ 2ನೇ ಆವೃತ್ತಿಯಲ್ಲಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಇಂದಿನ ಪಂದ್ಯಗಳು: ಯೋಧಾಸ್‌-ಜೈಪುರ, ರಾತ್ರಿ 8ಕ್ಕೆ, ಪಾಟ್ನಾ-ಮುಂಬಾ, ರಾತ್ರಿ 9ಕ್ಕೆ. ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌