ಸಾರಾಂಶ
ಮೊದಲ ಆವೃತ್ತಿಯಿಂದ ಸತತ 9 ಆವೃತ್ತಿಗಳಲ್ಲಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಪ್ರಶಾಂತ್ ರೈ. ಇದೇ ಮೊದಲ ಬಾರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಪ್ರಶಾಂತ್.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಕನ್ನಡಿಗ ಪ್ರಶಾಂತ್ ರೈ ಪಾಟ್ನಾ ಪೈರೇಟ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.ಇದೇ ಮೊದಲ ಬಾರಿಗೆ ಅವರು ತಂಡವೊಂದರ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೊ ಕಬಡ್ಡಿಯಲ್ಲಿ ಮೊದಲ ಆವೃತ್ತಿಯಿಂದ 9ನೇ ಆವೃತ್ತಿಯ ವರೆಗೂ ಆಟಗಾರನಾಗಿ ಆಡಿದ್ದ ಪ್ರಶಾಂತ್, ಕೆಲ ವರ್ಷಗಳ ಕಾಲ ಪಾಟ್ನಾ ತಂಡದಲ್ಲೂ ಆಡಿದ್ದಲ್ಲದೇ, ಆ ತಂಡದ ನಾಯಕನ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.
ಅವರ ನಾಯಕತ್ವದಲ್ಲಿ ತಂಡ ಫೈನಲ್ ಸಹ ಪ್ರವೇಶಿಸಿತ್ತು. 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಹಾಗೂ ಶುಕ್ರವಾರ (ಆ.15, 16) ಮುಂಬೈನಲ್ಲಿ ನಡೆಯಲಿದೆ.