ಕ್ರೀಡೆಯ ರಾಯಭಾರಿಯಾಗಿ ನೀವು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದೀರಿ: ಅಶ್ವಿನ್‌ಗೆ ಪ್ರಧಾನಿ ಮೋದಿ ಪತ್ರ

| Published : Dec 23 2024, 01:04 AM IST / Updated: Dec 23 2024, 04:05 AM IST

ಕ್ರೀಡೆಯ ರಾಯಭಾರಿಯಾಗಿ ನೀವು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದೀರಿ: ಅಶ್ವಿನ್‌ಗೆ ಪ್ರಧಾನಿ ಮೋದಿ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರದಲ್ಲಿ ಅಶ್ವಿನ್‌ರ 14 ವರ್ಷಗಳ ಕ್ರಿಕೆಟ್ ಬದುಕಿನ ಪ್ರಮುಖ ಕ್ಷಣ, ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ಅವರ ತ್ಯಾಗ ಮತ್ತು ಬದ್ಧತೆ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಆರ್‌.ಅಶ್ವಿನ್‌ಗೆ ಪ್ರಧಾನಿ ನರೇಂದ್ರ ಮೋದಿ ಸುದೀರ್ಘ ಪತ್ರ ಬರೆದು, ಶುಭ ಹಾರೈಸಿದ್ದಾರೆ. ಅಶ್ವಿನ್‌ರನ್ನು ಕ್ರೀಡೆಯ ರಾಯಭಾರಿ ಎಂದು ಬಣ್ಣಿಸಿರುವ ಪ್ರಧಾನಿ, ನೀವು ಕುಟುಂಬ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಶ್ಲಾಘಿಸಿದ್ದಾರೆ.ಪತ್ರದಲ್ಲಿ ಅಶ್ವಿನ್‌ರ 14 ವರ್ಷಗಳ ಕ್ರಿಕೆಟ್ ಬದುಕಿನ ಪ್ರಮುಖ ಕ್ಷಣ, ಸಾಧನೆಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಅಶ್ವಿನ್‌ ಕ್ರಿಕೆಟ್ ಆಡಿದ್ದ ಘಟನೆಯನ್ನು ಉಲ್ಲೇಖಿಸಿ ಅವರ ತ್ಯಾಗ ಮತ್ತು ಬದ್ಧತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

‘ಕ್ರಿಕೆಟ್‌ನಿಂದ ನಿವೃತ್ತರಾಗುವ ದಿಢೀರ್ ನಿರ್ಧಾರ ಜಗತ್ತಿನೆಲ್ಲೆಡೆಯ ನಿಮ್ಮ ಅಭಿಮಾನಿಗಳಿ ಅಚ್ಚರಿ ತಂದಿದೆ. ನಿಮ್ಮಿಂದ ಎಲ್ಲರೂ ಮತ್ತಷ್ಟು ಆಫ್ ಬ್ರೇಕ್ ಬೌಲಿಂಗ್‌ ನಿರೀಕ್ಷೆಯಲ್ಲಿದ್ದಾಗ, ನೀವು ನಿವೃತ್ತಿಯ ಕೇರಮ್‌ ಬಾಲ್ ಎಸೆದು ಎಲ್ಲರನ್ನೂಚಕಿತಗೊಳಿಸಿದ್ದೀರಿ. ಭಾರತಕ್ಕೆ ಇಷ್ಟು ವರ್ಷಗಳ ಕಾಲ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದೀಗ ಈ ನಿರ್ಧಾರ ತಳೆಯುವುದು ಬಹಳ ಕಠಿಣ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ. ಈ ಸಂದರ್ಭ ನಾನು ನಿಮ್ಮ ಹೆತ್ತವರು, ನಿಮ್ಮ ಪತ್ನಿ ಪ್ರೀತಿ ಮತ್ತು ಪುತ್ರಿಗೂ ಶುಭಾಶಯ ತಿಳಿಸುತ್ತೇನೆ. ಅವರ ಪ್ರೋತ್ರಾಹ ಮತ್ತು ತ್ಯಾಗ ನಿಮ್ಮನ್ನು ಒಬ್ಬ ಉತ್ತಮ ಕ್ರಿಕೆಟರ್ ಮತ್ತು ವ್ಯಕ್ತಿಯನ್ನಾಗಿ ಬೆಳೆಸಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.