ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಕ್ರೀಡಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ರಾಜ್ಯದ 22 ಮಂದಿ ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ(ಕೆಒಎ)ಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೋಮವಾರ ಪ್ರಶಸ್ತಿ ವಿಜೇತರ ಹೆಸರನ್ನು ಕೆಒಎ ಪ್ರಕಟಿಸಿದೆ.ಅಥ್ಲೆಟಿಕ್ಸ್‌ನ ಪ್ರಿಯಾ ಮೋಹನ್, ಬ್ಯಾಡ್ಮಿಂಟನ್‌ನ ಮಿಥುನ್ ಮಂಜುನಾಥ್, ಬಾಸ್ಕೆಟ್‌ಬಾಲ್‌ನ ಮನೋಜ್ ಬಿ.ಎಂ., ಫುಟ್ಬಾಲಿಗ ಸೋಮ್ ಕುಮಾರ್, ಹಾಕಿ ಪಟು ಆಭರಣ್ ಸುದೇವ್, ಈಜಿನಲ್ಲಿ ತನಿಶಾ ಜಾರ್ಜ್, ಸೈಕ್ಲಿಂಗ್‌ನ ಸಂಪತ್, ಫೆನ್ಸಿಂಗ್‌ನ ಸಾತ್ವಿಕ್, ಜಿಮ್ನಾಸ್ಟಿಕ್ ತಾರೆ ಶ್ರೀವರ್ಷಿಣಿ, ನೆಟ್‌ಬಾಲ್‌ನ ಗಗನಾ, ರೈಫಲ್ ಶೂಟಿಂಗ್ ತಾರೆ ತಿಲೋತ್ತಮಾ ಸೆನ್, ಲಾನ್ ಟೆನಿಸ್‌ನ ಮನೀಶ್, ಟೆಕ್ವಾಂಡೊ ಪಟು ಪ್ರೀತಂ, ವೇಟ್‌ಲಿಫ್ಟಿಂಗ್‌ನ ಉಶಾ, ಕಯಾಕಿಂಗ್‌ನ ಕುಮೇಶ್ವರನ್‌ಗೂ ಪ್ರಶಸ್ತಿ ಒಲಿದಿದೆ.ಇನ್ನು, 30 ವರ್ಷಗಳಿಂದಲೂ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಮಾಧ್ಯಮ ಸಂಯೋಜಕರಾಗಿರುವ ರವೀಂದ್ರ ಸಿಂಗ್, ಹಿರಿಯ ಕ್ರೀಡಾ ಪತ್ರಕರ್ತ ಗಿರೀಶ್ ದೊಡ್ಡಮಣಿ, ಫೋಟೋಗ್ರಾಫರ್ ನರಸಿಂಹ, ಮಾಜಿ ಶಟ್ಲರ್ ವೆಂಕಟೇಶ್ ಪ್ರಸಾದ್, ಮಾಜಿ ಬಾಕ್ಸರ್ ಧನಂಜಯ, ಮಾಜಿ ಹಾಕಿ ಪಟು ಸಿ.ಎಸ್.ಪೂನಚ್ಚ, ಮಾಜಿ ಈಜು ಪಟು ಬಿ.ಆರ್.ಗೋಪಾಲ್ ರಾವ್ ಕೂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮಂಗಳವಾರ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ. ಇದೇ ವೇಳೆ ಏಷ್ಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿ, ನಗದು ಬಹುಮಾನ ಹಸ್ತಾಂತರಿಸಲಾಗುವುದು ಎಂದು ಕೆಒಎ ತಿಳಿಸಿದೆ.