ಪ್ರೊ ಕಬಡ್ಡಿ: ಬುಲ್ಸ್‌ ಕಮ್‌ಬ್ಯಾಕ್‌ಗೆ ಬೆಚ್ಚಿದ ಪೈರೇಟ್ಸ್‌!

| Published : Jan 09 2024, 02:00 AM IST / Updated: Jan 09 2024, 04:13 PM IST

Pro Kabaddi League
ಪ್ರೊ ಕಬಡ್ಡಿ: ಬುಲ್ಸ್‌ ಕಮ್‌ಬ್ಯಾಕ್‌ಗೆ ಬೆಚ್ಚಿದ ಪೈರೇಟ್ಸ್‌!
Share this Article
  • FB
  • TW
  • Linkdin
  • Email

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಸೋಮವಾರ ಬೆಂಗಳೂರು ಬುಲ್ಸ್‌ ತಂಡಕ್ಕೆ ಪಾಟ್ನಾಪೈರೆಟ್ಸ್‌ ವಿರುದ್ಧ ಪಂದ್ಯದಲ್ಲಿ 35-33 ಅಂಕಗಳ ರೋಚಕ ಗೆಲುವು ಸಿಕ್ಕಿದೆ. ಪಂದ್ಯ ಸೋಲುವ ಭೀತಿಯಲ್ಲಿದ್ದ ಬುಲ್ಸ್‌ ಕೊನೆಯ 5 ನಿಮಿಷಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೆಲುವು ತನ್ನದಾಗಿಸಿಕೊಂಡಿತು.

ಮುಂಬೈ: ಕೊನೆ 5 ನಿಮಿಷಗಳಲ್ಲಿ ಅದ್ಭುತ ಕಮ್‌ಬ್ಯಾಕ್‌ ಮಾಡಿದ ಬೆಂಗಳೂರು ಬುಲ್ಸ್‌ 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ 5ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಂಡಿದೆ. ಸೋಮವಾರ ಪಾಟ್ನಾ ಪೈರೇಟ್ಸ್‌ ವಿರುದ್ಧ ಬುಲ್ಸ್‌ಗೆ 35-33 ಅಂಕಗಳ ರೋಚಕ ಗೆಲುವು ಲಭಿಸಿತು. ತಂಡ 12 ಪಂದ್ಯಗಳಲ್ಲಿ 5 ಜಯ, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 00ನೇ ಸ್ಥಾನದಲ್ಲಿದೆ. ಅತ್ತ ಪಾಟ್ನಾ 11ರಲ್ಲಿ 6ನೇ ಸೋಲನುಭವಿಸಿತು.

ಆರಂಭದಿಂದಲೇ ಮೇಲುಗೈ ಸಾಧಿಸಿದ ಪಾಟ್ನಾ ಪ್ರಥಮಾರ್ಧದಲ್ಲಿ 20-12 ಅಂಕಗಳಿಂದ ಮುನ್ನಡೆಯಲ್ಲಿತ್ತು. ಕೊನೆವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಪಾಟ್ನಾ ಗೆಲುವಿನ ನಿರೀಕ್ಷೆಯಲ್ಲಿತ್ತು. ಒಂದು ಹಂತದಲ್ಲಿ ಪಾಟ್ನಾ 33-23 ಅಂಕಗಳಲ್ಲಿ ಅಂತರ ಕಾಯ್ದುಕೊಂಡಿತ್ತು. ಆದರೆ ಕೊನೆ ನಾಲ್ಕೂವರೆ ನಿಮಿಷಗಳಲ್ಲಿ ಬುಲ್ಸ್‌ 12 ಅಂಕ ಗಳಿಸಿದರೆ, ಪಾಟ್ನಾ ಒಂದೂ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಡಿಫೆಂಡರ್‌ಗಳು ಹಾಗೂ ರೈಡರ್‌ ಸುಶಿಲ್‌ ಪಂದ್ಯದ ದಿಕ್ಕು ಬದಲಿಸಿದರು. 2 ಸೂಪರ್‌ ಟ್ಯಾಕಲ್‌, ಆಲೌಟ್‌ ಮೂಲಕ ಪಾಟ್ನಾವನ್ನು ಬುಲ್ಸ್‌ ಕಟ್ಟಿಹಾಕಿತು.

ಬುಲ್ಸ್‌ ಪರ ಸಚಿನ್‌ ನರ್ವಾಲ್‌ ರೈಡಿಂಗ್‌ನಲ್ಲಿ 9 ಅಂಕ ಪಡೆದು ಮಿಂಚಿದರೆ, ಡಿಪೆಂಡರ್‌ ಸುರ್ಜಿತ್‌ 8 ಅಂಕ ಗಳಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಮುಂಬಾ ವಿರುದ್ಧ

ಡೆಲ್ಲಿಗೆ ಗೆಲುವು

ಸೋಮವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್‌ ಡೆಲ್ಲಿ ತಂಡ 40-34 ಅಂಕಗಳಿಂದ ಗೆಲುವು ಸಾಧಿಸಿತು. ತವರಿನಲ್ಲಿ ಯು ಮುಂಬಾ ಸತತ ಎರಡನೇ ಸೋಲನಭವಿಸಿತು. ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿ 40 ಅಂಕ ಸಂಪಾದಿಸಿರುವ ಡೆಲ್ಲಿ ಅಂಕಪಟ್ಟಿಯಲ್ಲಿ 2 ಸ್ಥಾನದಲ್ಲಿದೆ. ಯು ಮುಂಬಾ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 4ರಲ್ಲಿ ಪರಾಭವಗೊಂಡಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

-

ಇಂದಿನ ಪಂದ್ಯಗಳು

ತೆಲುಗು ಟೈಟಾನ್ಸ್‌-ಬೆಂಗಾಲ್‌ ವಾರಿಯರ್ಸ್‌, ರಾತ್ರಿ 8ಕ್ಕೆ