ಪ್ರೊ ಕಬಡ್ಡಿ: ಬೆಂಗಾಲ್‌, ಜೈಪುರಕ್ಕೆ ಒಲಿದ ಜಯ!

| Published : Jan 14 2024, 01:38 AM IST / Updated: Jan 14 2024, 02:17 PM IST

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಶನಿವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಗೆಲುವು ಸಾಧಿಸಿವೆ. ಇನ್ನೊಂದು ಪಂದ್ಯದಲ್ಲಿ ಯು.ಪಿ. ಯೋಧಾಸ್‌ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲನುಭವಿಸಿತು

ಜೈಪುರ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಶನಿವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ಬೆಂಗಾಲ್‌ ವಾರಿಯರ್ಸ್‌ ತಂಡಗಳು ಗೆಲುವು ಸಾಧಿಸಿದೆ.ಆರಂಭಿಕ ಪಂದ್ಯದಲ್ಲಿ ಜೈಪುರಕ್ಕೆ ಪುಣೇರಿ ಪಲ್ಟನ್‌ ವಿರುದ್ಧ 36-34 ಅಂಕಗಳ ರೋಚಕ ಗೆಲುವು ಲಭಿಸಿತು. 

ಜೈಪುರ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಉಳಿದಿದೆ. ಅತ್ತ ಪುಣೆ 12 ಪಂದ್ಯಗಳಲ್ಲಿ 2ನೇ ಸೋಲುಂಡರೂ, ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಜೈಪುರದ ಅರ್ಜುನ್‌ ದೇಶ್ವಾಲ್‌ 16 ಅಂಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಬೆಂಗಾಲ್‌ಗೆ 42-37 ಅಂಕಗಳ ಗೆಲುವು ಲಭಿಸಿತು. ಪರ್ದೀಪ್‌ ನರ್ವಾಲ್‌ 16 ಅಂಕ ಸಂಪಾದಿಸಿದರೂ ತಂಡಕ್ಕೆ ಗೆಲುವು ಲಭಿಸಲಿಲ್ಲ. ಬೆಂಗಾಲ್‌ನ ಮಣೀಂದರ್‌ ಸಿಂಗ್‌ 14 ಅಂಕ ಗಳಿಸಿದರು. 

ಯೋಧಾಸ್‌ 13 ಪಂದ್ಯಗಳಲ್ಲಿ 9ನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅತ್ತ ಬೆಂಗಾಲ್‌ 12 ಪಂದ್ಯಗಳಲ್ಲಿ 5 ಜಯದೊಂದಿಗೆ 7ನೇ ಸ್ಥಾನದಲ್ಲಿದೆ.

ಇಂದಿನ ಪಂದ್ಯಗಳು: ಹರ್ಯಾಣ ಸ್ಟೀಲರ್ಸ್‌-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆದಬಾಂಗ್‌ ಡೆಲ್ಲಿ-ಪಾಟ್ನಾ ಪೈರೇಟ್ಸ್‌, ರಾತ್ರಿ 9ಕ್ಕೆ