ಪ್ರೊ ಲೀಗ್‌ ಹಾಕಿ: ಅಮೆರಿಕ ವಿರುದ್ಧ ಗೆದ್ದ ಭಾರತ ವನಿತೆಯರು

| Published : Feb 19 2024, 01:31 AM IST

ಪ್ರೊ ಲೀಗ್‌ ಹಾಕಿ: ಅಮೆರಿಕ ವಿರುದ್ಧ ಗೆದ್ದ ಭಾರತ ವನಿತೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ಸಾಧಿಸಿದೆ. ವಿಶ್ವ ನಂ.3 ಆಸ್ಟ್ರೇಲಿಯಾವನ್ನು ಸೋಲಿಸಿದ ಬಳಿಕ, ಭಾನುವಾರ ಅಮೆರಿಕದ ವಿರುದ್ಧ ಶೂಟೌಟ್‌ನಲ್ಲಿ 2-1 ಗೋಲುಗಳ ಗೆಲುವು ಪಡೆಯಿತು.

ರೂರ್ಕೆಲಾ: ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ಸಾಧಿಸಿದೆ. ವಿಶ್ವ ನಂ.3 ಆಸ್ಟ್ರೇಲಿಯಾವನ್ನು ಸೋಲಿಸಿದ ಬಳಿಕ, ಭಾನುವಾರ ಅಮೆರಿಕದ ವಿರುದ್ಧ ಶೂಟೌಟ್‌ನಲ್ಲಿ 2-1 ಗೋಲುಗಳ ಗೆಲುವು ಪಡೆಯಿತು. ನಿಗದಿತ 60 ನಿಮಿಷಗಳ ಆಟದ ಮುಕ್ತಾಯಕ್ಕೆ ಉಭಯ ತಂಡಗಳು 1-1 ಗೋಲುಗಳಲ್ಲಿ ಸಮಬಲ ಸಾಧಿಸಿದ್ದವು. ಫಲಿತಾಂಶಕ್ಕಾಗಿ ಶೂಟೌಟ್‌ನ ಮೊರೆ ಹೋಗಲಾಯಿತು. ಭಾರತ ತನ್ನ ತವರಿನ ಪಂದ್ಯಗಳನ್ನು ಮುಕ್ತಾಯಗೊಳಿಸಿದ್ದು, 8 ಪಂದ್ಯಗಳಲ್ಲಿ 3 ಜಯ, 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಬಾಕಿ ಇರುವ 8 ಪಂದ್ಯಗಳನ್ನು ಭಾರತ ವಿದೇಶಿ ನೆಲದಲ್ಲಿ ಆಡಲಿದೆ.

ಪ್ರೊ ಕಬಡ್ಡಿ: 74 ಅಂಕಗಳಿಸಿ ತಲೈವಾಸ್‌ ದಾಖಲೆ!

ಪಂಚಕುಲಾ: ಬೆಂಗಾಲ್‌ ವಾರಿಯರ್ಸ್‌ ವಿರುದ್ಧ 74-37ರ ಗೆಲುವು ಸಾಧಿಸಿದ ತಮಿಳ್‌ ತಲೈವಾಸ್‌, ಪ್ರೊ ಕಬಡ್ಡಿ ಲೀಗ್‌ನ ಪಂದ್ಯವೊಂದರಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ ದಾಖಲೆ ಬರೆಯಿತು. ಈ ಹಿಂದೆ 5ನೇ ಹಾಗೂ 7ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್‌ 69 ಅಂಕ ಗಳಿಸಿದ್ದು ದಾಖಲೆ ಎನಿಸಿತ್ತು. 5ನೇ ಆವೃತ್ತಿಯಲ್ಲಿ ಹರ್ಯಾಣ ವಿರುದ್ಧ 69-30, 7ನೇ ಆವೃತ್ತಿಯಲ್ಲಿ ಬೆಂಗಾಲ್‌ ವಿರುದ್ಧ 69-41ರಲ್ಲಿ ಜಯ ಗಳಿಸಿತ್ತು. ಇನ್ನು ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿ 32-21ರಲ್ಲಿ ಜಯಭೇರಿ ಬಾರಿಸಿತು.