ಸಾರಾಂಶ
ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯನ್ನು ಭಾರತ ಬರೆದಿದೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತ ಒಟ್ಟು 28 ಸಿಕ್ಸರ್ ಸಿಡಿಸಿತು.
ರಾಜ್‌ಕೋಟ್: ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯನ್ನು ಭಾರತ ಬರೆದಿದೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಭಾರತ ಒಟ್ಟು 28 ಸಿಕ್ಸರ್ ಸಿಡಿಸಿತು. ಇದರೊಂದಿಗೆ ತನ್ನ ಹೆಸರಲ್ಲೇ ಇದ್ದ ದಾಖಲೆಯನ್ನು ಉತ್ತಮಪಡಿಸಿಕೊಂಡಿತು. 2019ರಲ್ಲಿ ವಿಶಾಖಪಟ್ಟಣಂನಲ್ಲಿ ದ.ಆಫ್ರಿಕಾ ವಿರುದ್ಧ ಭಾರತ 27 ಸಿಕ್ಸರ್ ಬಾರಿಸಿದ್ದು ಈ ಹಿಂದಿನ ದಾಖಲೆ ಎನಿಸಿತ್ತು. ಇದಕ್ಕೂ ಮುನ್ನ 2014ರಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ 22 ಸಿಕ್ಸರ್ ಸಿಡಿಸಿದ್ದು ದಾಖಲೆ ಆಗಿತ್ತು.ಸರಣಿಯಲ್ಲಿ 48 ಸಿಕ್ಸರ್: ದಾಖಲೆ!
ಭಾರತ ಈ ಸರಣಿಯಲ್ಲಿ 48 ಸಿಕ್ಸರ್ ಸಿಡಿಸಿದ್ದು, ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ತಂಡ ಎನ್ನುವ ವಿಶ್ವ ದಾಖಲೆಗೂ ಪಾತ್ರವಾಗಿದೆ. ತನ್ನ ಹೆಸರಲ್ಲೇ ಇದ್ದ ದಾಖಲೆಯನ್ನು ಭಾರತ ಉತ್ತಮಗೊಳಿಸಿಕೊಂಡಿದೆ. 2019ರಲ್ಲಿ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ 47 ಸಿಕ್ಸರ್ ಬಾರಿಸಿತ್ತು. ಸರಣಿಯಲ್ಲಿ ಗರಿಷ್ಠ ಸಿಕ್ಸರ್ತಂಡಸಿಕ್ಸರ್ವಿರುದ್ಧಟೆಸ್ಟ್ಆತಿಥ್ಯವರ್ಷ
ಭಾರತ48*ಇಂಗ್ಲೆಂಡ್03*ಭಾರತ2024ಭಾರತ47ದ.ಆಫ್ರಿಕಾ03ಭಾರತ2019
ಇಂಗ್ಲೆಂಡ್43ಆಸ್ಟ್ರೇಲಿಯಾ05ಇಂಗ್ಲೆಂಡ್2023ಆಸ್ಟ್ರೇಲಿಯಾ40ಇಂಗ್ಲೆಂಡ್05ಆಸ್ಟ್ರೇಲಿಯಾ2013(* ಟೆಸ್ಟ್ ಸರಣಿ ಇನ್ನೂ ಚಾಲ್ತಿಯಲ್ಲಿದ್ದು, 2 ಪಂದ್ಯ ಬಾಕಿ ಇದೆ)