ಸಾರಾಂಶ
ಬೆಂಗಳೂರು: ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾಕೇತ್ ಮೈನೇನಿ-ರಾಮ್‌ಕುಮಾರ್ ರಾಮ್‌ನಾಥ್ ಜೋಡಿಯು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾರತದ ಅಗ್ರ ಪುರುಷರ ಸಿಂಗಲ್ಸ್ ಆಟಗಾರ ಸುಮಿತ್ ನಗಲ್ ಅಭಿಯಾನ ಅಂತ್ಯಗೊಂಡಿದೆ. ಇಲ್ಲಿನ ಕೆಎಸ್‌ಎಲ್‌ಟಿಎ ಟೆನಿಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಡಬಲ್ಸ್ ಫೈನಲ್‌ನಲ್ಲಿ ಫ್ರೆಂಚ್‌ನ ಕಾನ್‌ಸ್ಟಾಂಟಿನೊ ಕೌಜ್ಮಿನ್ ಮತ್ತು ಮ್ಯಾಕ್ಸಿಮ್ ಜಾನ್ವಿಯರ್ ಜೋಡಿಯನ್ನು 6-3, 6-4 ನೇರ ಸೆಟ್‌ಗಳಲ್ಲಿ ಸೋಲಿಸಿದ ಭಾರತೀಯ ಜೋಡಿ ಡಬಲ್ಸ್ ಕಿರೀಟವನ್ನು ತಮ್ಮ ಮಡಿಲಿಗೆ ಹಾಕಿಕೊಂಡಿತು.
ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟ್ರೋಫಿ ಗೆದ್ದಿದ್ದ ನಾಗಲ್, ಇಟಲಿಯ ನಪೊಲಿಟಾನೊ ವಿರುದ್ಧ ಪ್ರಬಲ ಪೈಪೋಟಿಯ ಹೊರತಾಗಿಯೂ 6-7(2), 4-6ರ ಅಂತರದಲ್ಲಿ ಪರಾಭವಗೊಂಡರು.
ಇಟಾಲಿಯನ್ ಆಟಗಾರ ಈಗ ದಕ್ಷಿಣ ಕೊರಿಯಾದ ಸಿಯೊಂಗ್‌ಚಾನ್ ಹಾಂಗ್ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಹಾಂಗ್ ಅವರು ಮತ್ತೊಂದು ಸೆಮಿಫೈನಲ್‌ನಲ್ಲಿ 6-2, 3-6, 6-3 ರಲ್ಲಿ ಸ್ಪೇನ್‌ನ ಓರಿಯೊಲ್ ರೋಕಾ ಬಟಾಲ್ಲಾ ಅವರನ್ನು ಸೋಲಿಸಿದರು.
;Resize=(128,128))
;Resize=(128,128))
;Resize=(128,128))