ಆಫ್ರಿಕಾದ ದಿಗ್ಗಜ ಆಲ್ರೌಂಡರ್‌ ಮೈಕ್‌ ಪ್ರೊಕ್ಟರ್‌ ನಿಧನ

| Published : Feb 19 2024, 01:30 AM IST

ಸಾರಾಂಶ

ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್‌ ಮೈಕ್‌ ಪ್ರೊಕ್ಟರ್‌ (77) ಭಾನುವಾರ ನಿಧನರಾಗಿದ್ದಾರೆ. ಹೃದಯ ಸ್ಥಂಭನದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜೋಹಾನ್ಸ್‌ ಬರ್ಗ್‌: ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್‌ ಮೈಕ್‌ ಪ್ರೊಕ್ಟರ್‌ (77) ಭಾನುವಾರ ನಿಧನರಾಗಿದ್ದಾರೆ. ಹೃದಯ ಸ್ಥಂಭನದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಮರಿಯಾನಾ ಖಚಿತಪಡಿಸಿದ್ದಾರೆ. ಚತುರ ನಾಯಕತ್ವದಿಂದ ಹೆಸರಾಗಿದ್ದ ಅವರು, ಆಫ್ರಿಕಾ ತಂಡದಲ್ಲಿ ಸ್ಪಿನ್ನರ್‌ ಹಾಗೂ ಸ್ಫೋಟಕ ಬ್ಯಾಟರ್‌ ಆಗಿ ಮಿಂಚಿದ್ದರು. 401 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, ದಕ್ಷಿಣ ಆಫ್ರಿಕಾ ಪ್ರತ್ಯೇಕತೆಯ ಹಿನ್ನೆಲೆಯಲ್ಲಿ 1970-80ರ ಅವಧಿಯಲ್ಲಿ ಕೇವಲ 7 ಟೆಸ್ಟ್‌ಗಳನ್ನಾಡಲು ಮಾತ್ರ ಸಾಧ್ಯವಾಗಿತ್ತು. ಪ್ರೊಕ್ಟರ್‌ ಹಲವು ವರ್ಷಗಳ ಕಾಲ ಐಸಿಸಿ ಮ್ಯಾಚ್‌ ರೆಫ್ರಿಯಾಗಿ ಸಹ ಕಾರ್ಯನಿರ್ವಹಿಸಿದ್ದರು. ದಿಗ್ಗಜ ಆಲ್ರೌಂಡರ್‌ ನಿಧನಕ್ಕೆ ಕ್ರಿಕೆಟ್‌ ಲೋಕ ಸಂತಾಪ ಸೂಚಿಸಿದೆ.

ಚೆನ್ನೈಗೆ ತೆರಳಿದ್ದ ಅಶ್ವಿನ್‌ 4ನೇ ದಿನದಾಟಕ್ಕೆ ಹಾಜರ್

ರಾಜ್‌ಕೋಟ್‌: ತಾಯಿಯ ಅನಾರೋಗ್ಯದ ಹಿನ್ನೆಲೆ ಶನಿವಾರ ಆಟಕ್ಕೆ ಗೈರಾಗಿ ಚೆನೈಗೆ ತೆರಳಿದ್ದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ ಭಾನುವಾರ ಚಹಾ ವಿರಾಮದ ನಂತರ ಮತ್ತೆ ಮೈದಾನಕ್ಕಿಳಿದರು. ಇದಕ್ಕೂ ಮುನ್ನ ನಾಲ್ಕನೇ ದಿನದಾಟದಲ್ಲಿ ಅಶ್ವಿನ್‌ ಹಾಜರಿಯನ್ನು ಬಿಸಿಸಿಐ ಖಾತರಿಪಡಿಸಿತ್ತು. ಅಶ್ವಿನ್‌ ಪ್ರಯಾಣಕ್ಕೆ ಬೇಕಿದ್ದ ಎಲ್ಲಾ ವ್ಯವಸ್ಥೆಯನ್ನು ಬಿಸಿಸಿಐ ಕಲ್ಪಿಸಿತ್ತು ಎಂದು ತಿಳಿದುಬಂದಿದೆ.