100ನೇ ಟೆಸ್ಟ್‌ ಆಡಲು ಆರ್‌.ಅಶ್ವಿನ್‌, ಜಾನಿ ಬೇರ್‌ಸ್ಟೋವ್‌ ಉತ್ಸುಕ

| Published : Mar 06 2024, 02:22 AM IST

ಸಾರಾಂಶ

ಭಾರತದ ದಿಗ್ಗಜ ಸ್ಪಿನ್ನರ್‌ ಆರ್‌.ಅಶ್ವಿನ್‌ ಹಾಗೂ ಇಂಗ್ಲೆಂಡ್‌ನ ತಾರಾ ಬ್ಯಾಟರ್‌ ಜಾನಿ ಬೇರ್‌ಸ್ಟೋವ್‌ ತಮ್ಮ ವೃತ್ತಿಬದುಕಿನ 100ನೇ ಟೆಸ್ಟ್‌ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ.

ಧರ್ಮಶಾಲಾ: ಭಾರತದ ದಿಗ್ಗಜ ಸ್ಪಿನ್ನರ್‌ ಆರ್‌.ಅಶ್ವಿನ್‌ ಹಾಗೂ ಇಂಗ್ಲೆಂಡ್‌ನ ತಾರಾ ಬ್ಯಾಟರ್‌ ಜಾನಿ ಬೇರ್‌ಸ್ಟೋವ್‌ ತಮ್ಮ ವೃತ್ತಿಬದುಕಿನ 100ನೇ ಟೆಸ್ಟ್‌ ಪಂದ್ಯವನ್ನಾಡಲು ಉತ್ಸುಕರಾಗಿದ್ದಾರೆ. ಗುರುವಾರದಿಂದ ಆರಂಭಗೊಳ್ಳಲಿರುವ ಭಾರತ-ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ನಲ್ಲಿ ಈ ಇಬ್ಬರು 100 ಪಂದ್ಯಗಳ ಮೈಲಿಗಲ್ಲು ತಲುಪಲಿದ್ದಾರೆ.ಇಬ್ಬರು ಆಟಗಾರರು ಒಟ್ಟಿಗೆ ತಮ್ಮ 100ನೇ ಪಂದ್ಯವಾಡುವುದು ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲೇ ಇದು ಕೇವಲ 4ನೇ ಬಾರಿ. 2000ರಲ್ಲಿ ಇಂಗ್ಲೆಂಡ್‌ನ ಮೈಕಲ್‌ ಅಥರ್‌ಟನ್‌ ಹಾಗೂ ಅಲೆಕ್ ಸ್ಟೀವರ್ಟ್‌ ಮೊದಲ ಬಾರಿಗೆ ಒಟ್ಟಿಗೆ 100ನೇ ಪಂದ್ಯವಾಡಿದ ಜೋಡಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 2006ರಲ್ಲಿ ದ.ಆಫ್ರಿಕಾದ ಜ್ಯಾಕ್‌ ಕಾಲಿಸ್‌, ಶಾನ್‌ ಪೊಲ್ಲಾಕ್‌ ಹಾಗೂ ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ ಒಟ್ಟಿಗೆ 100ನೇ ಪಂದ್ಯವನ್ನಾಡಿದ್ದರು. ಇನ್ನು 2013ರಲ್ಲಿ ಆಸ್ಟ್ರೇಲಿಯಾದ ಮೈಕಲ್‌ ಕ್ಲಾರ್ಕ್‌ ಹಾಗೂ ಇಂಗ್ಲೆಂಡ್‌ನ ಅಲಿಸ್ಟೈರ್‌ ಕುಕ್‌ ಒಂದೇ ಪಂದ್ಯದಲ್ಲಿ 100 ಟೆಸ್ಟ್‌ಗಳ ಮೈಲಿಗಲ್ಲು ತಲುಪಿದ್ದರು.