ರಣಜಿ: ರಾಜ್ಯಕ್ಕೆ ಮಯಾಂಕ್ ಸಾರಥ್ಯ, ಕರುಣ್‌ ಕಮ್‌ಬ್ಯಾಕ್

| N/A | Published : Oct 07 2025, 05:52 AM IST

Mayank Agarwal
ರಣಜಿ: ರಾಜ್ಯಕ್ಕೆ ಮಯಾಂಕ್ ಸಾರಥ್ಯ, ಕರುಣ್‌ ಕಮ್‌ಬ್ಯಾಕ್
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಅ.15ರಿಂದ 18ರ ವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಮಯಂಕ್‌ ಅಗರ್‌ವಾಲ್‌ ನಾಯಕತ್ವ ವಹಿಸಲಿದ್ದಾರೆ.

  ಬೆಂಗಳೂರು :  ರಣಜಿ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಯಲ್ಲಿ ಅ.15ರಿಂದ 18ರ ವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಮಯಂಕ್‌ ಅಗರ್‌ವಾಲ್‌ ನಾಯಕತ್ವ ವಹಿಸಲಿದ್ದಾರೆ.

2 ವರ್ಷಗಳ ಹಿಂದೆ ರಾಜ್ಯ ತಂಡ ತೊರೆದು ವಿದರ್ಭ ಪರ ಆಡಿದ್ದ ಕರುಣ್‌ ನಾಯರ್‌ ಮತ್ತೆ ಕರ್ನಾಟಕಕ್ಕೆ ಆಗಮಿಸಿದ್ದು, ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಿರಿಯ ಆಟಗಾರರಾದ ಶ್ರೇಯಸ್‌ ಗೋಪಾಲ್‌, ವಿದ್ವತ್‌ ಕಾವೇರಪ್ಪ, ಅಭಿನವ್‌ ಮನೋಹರ್‌, ಯುವ ಬ್ಯಾಟರ್‌ ಆರ್‌.ಸ್ಮರಣ್‌ ಕೂಡಾ ತಂಡದಲ್ಲಿದ್ದಾರೆ. ಕೃತಿಕ್‌ ಕೃಷ್ಣ ಹಾಗೂ ಶಿಖರ್‌ ಶೆಟ್ಟಿ ಮೊದಲ ಬಾರಿ ತಂಡಕ್ಕೆ ಅಯ್ಕೆಯಾಗಿದ್ದಾರೆ. ಆದರೆ ದೇವದತ್‌ ಪಡಿಕ್ಕಲ್‌ ಭಾರತ ಪಟೆಸ್ಟ್‌ ತಂಡದಲ್ಲಿರುವ ಕಾರಣ ಸೌರಾಷ್ಟ್ರ ವಿರುದ್ಧ ಪಂದ್ಯಕ್ಕೆ ಲಭ್ಯರಿಲ್ಲ.

ತಂಡ: ಮಯಾಂಕ್‌(ನಾಯಕ), ಕರುಣ್‌ ನಾಯರ್‌, ಸ್ಮರಣ್‌, ಶ್ರೀಜಿತ್‌ ಕೆ.ಎಲ್‌., ಶ್ರೇಯಸ್‌ ಗೋಪಾಲ್‌, ವೈಶಾಖ್‌, ವಿದ್ವತ್‌, ಅಭಿಲಾಶ್‌ ಶೆಟ್ಟಿ, ಎಂ. ವೆಂಕಟೇಶ್‌, ನಿಕಿನ್‌ ಜೋಸ್‌, ಅಭಿನವ್‌, ಕೃತಿಕ್‌ ಕೃಷ್ಣ, ಅನೀಶ್‌ ಕೆ.ವಿ., ಮೊಹ್ಸಿನ್‌ ಖಾನ್‌, ಶಿಖರ್‌ ಶೆಟ್ಟಿ.

Read more Articles on