ರಣಜಿ ಟ್ರೋಫಿ: ಗುಜರಾತ್‌ ಮೇಲೆ ಕರ್ನಾಟಕ ಅಧಿಪತ್ಯ

| Published : Jan 15 2024, 01:45 AM IST

ರಣಜಿ ಟ್ರೋಫಿ: ಗುಜರಾತ್‌ ಮೇಲೆ ಕರ್ನಾಟಕ ಅಧಿಪತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಗುಜರಾತ್‌ ವಿರುದ್ಧ ಗೆಲುವಿನತ್ತ ಸಾಗುತ್ತಿದೆ. ರಾಜ್ಯ ಮೊದಲ ಇನ್ನಿಂಗ್ಸ್‌ನಲ್ಲಿ 374ಕ್ಕೆ ಆಲೌಟ್‌ ಆಗಿದ್ದು, ಭಾನುವಾರ ದಿನದಾಟ ಮುಕ್ತಾಯದ ವೇಳೆ ಗುಜರಾತ್‌ 7 ವಿಕೆಟ್‌ಗೆ 171ರನ್ ಗಳಿಸಿದೆ.

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಗುಜರಾತ್‌ ವಿರುದ್ಧ ಗೆಲುವಿನತ್ತ ಸಾಗುತ್ತಿದೆ. ರಾಜ್ಯ ಮೊದಲ ಇನ್ನಿಂಗ್ಸ್‌ನಲ್ಲಿ 374ಕ್ಕೆ ಆಲೌಟ್‌ ಆಗಿದ್ದು, ಭಾನುವಾರ ದಿನದಾಟ ಮುಕ್ತಾಯದ ವೇಳೆ ಗುಜರಾತ್‌ 7 ವಿಕೆಟ್‌ಗೆ 171ರನ್ ಗಳಿಸಿದೆ.ಅಹಮದಾಬಾದ್‌: ಬೌಲಿಂಗ್‌ನಲ್ಲಿ ಮತ್ತೆ ಅಭೂತಪೂರ್ವ ಪ್ರದರ್ಶನ ತೋರಿದ ಕರ್ನಾಟಕ ಈ ಬಾರಿ ರಣಜಿ ಟ್ರೋಫಿಯಲ್ಲಿ ಸತತ 2ನೇ ಗೆಲುವಿನತ್ತ ದಾಪುಗಾಲಿಟ್ಟಿದೆ. ಸದ್ಯ ಗುಜರಾತ್‌ 2ನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 171 ರನ್‌ ಗಳಿಸಿದ್ದು, ಕೇವಲ 61 ರನ್‌ ಮುನ್ನಡೆಯಲ್ಲಿದೆ. ಕೊನೆ ದಿನವಾದ ಸೋಮವಾರ ಗುಜರಾತನ್ನು ಬೇಗನೇ ಆಲೌಟ್‌ ಮಾಡಿ, ಕಡಿಮೆ ಗುರಿ ಪಡೆದು ಗೆಲ್ಲುವ ತವಕದಲ್ಲಿ ಕರ್ನಾಟಕ ಆಟಗಾರರು ಇದ್ದಾರೆ.ಇದಕ್ಕೂ ಮೊದಲು 2ನೇ ದಿನದಂತ್ಯಕ್ಕೆ 328ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ರಾಜ್ಯ ತಂಡ ಭಾನುವಾರ 374ಕ್ಕೆ ಸರ್ವಪತನ ಕಂಡಿತು. 56 ರನ್‌ ಗಳಿಸಿದ ಕ್ರೀಸ್‌ ಕಾಯ್ದುಕೊಂಡಿದ್ದ ಮನೀಶ್‌ ಪಾಂಡೆ 88ಕ್ಕೆ ಔಟಾದರೆ, ಪಾದಾರ್ಪಣಾ ಪಂದ್ಯವಾಡುತ್ತಿರುವ ಸುಜತ್‌ ಸತೇರಿ 31 ರನ್ ಕೊಡುಗೆ ನೀಡಿದರು. ತಂಡದ ಕೊನೆ 5 ವಿಕೆಟ್‌ ಕೇವಲ 26 ರನ್ ಅಂತರದಲ್ಲಿ ಉರುಳಿತು. ಇದರ ಹೊರತಾಗಿಯೂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 110 ರನ್‌ ಮುನ್ನಡೆ ಪಡೆಯಿತು.

ಮಾರಕ ದಾಳಿ:

ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಗುಜರಾತನ್ನು ಮತ್ತೆ ರಾಜ್ಯದ ಬೌಲರ್‌ಗಳು ಕಾಡಿದರು. 7ನೇ ಓವರಲ್ಲಿ ಪ್ರಿಯಾಂಕ್‌ ಪಾಂಚಾಲ್‌(04)ರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಗುಜರಾತ್‌ ಕುಸಿತಕ್ಕೆ ಕೌಶಿಕ್‌ ನಾಂದಿ ಹಾಡಿದರು. ಬಳಿಕ ಹಿಂಗ್ರಾಜಿಯಾ(56 ರನ್‌) ಹೊರತುಪಡಿಸಿದ ಯಾವ ಬ್ಯಾಟರ್‌ಗೂ ಕೂಡಾ ರಾಜ್ಯದ ವೇಗಿಗಳನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಕೌಶಿಕ್‌, 14 ಓವರಲ್ಲಿ 10 ಮೇಡಿನ್‌ ಸಹಿತ 11 ರನ್‌ಗೆ 3 ವಿಕೆಟ್‌ ಕಬಳಿಸಿದರು. ಯುವ ಸ್ಪಿನ್ನರ್‌ ರೋಹಿತ್‌ ಕುಮಾರ್‌ 2, ವೈಶಾಖ್‌, ಶುಭಾಂಗ್‌ ತಲಾ 1 ವಿಕೆಟ್‌ ಪಡೆದಿದ್ದಾರೆ.ಸ್ಕೋರ್‌: ಗುಜರಾತ್‌ 264/10 ಮತ್ತು 171/7(3ನೇ ದಿನದಂತ್ಯಕ್ಕೆ) (ಹಿಂಗ್ರಾಜಿಯಾ 56, ಕೌಶಿಕ್‌ 3-11, ರೋಹಿತ್‌ 2-42), ಕರ್ನಾಟಕ 374/10 (ಮನೀಶ್‌ 88, ಸುಜಯ್‌ 31, ಚಿಂತನ್‌ 3-65)