ರಣಜಿ ಟ್ರೋಫಿ: ಗುಜರಾತ್‌ ವಿರುದ್ಧ ಕರ್ನಾಟಕಕ್ಕೆ ಲೀಡ್‌

| Published : Jan 14 2024, 01:32 AM IST / Updated: Jan 14 2024, 02:19 PM IST

ರಣಜಿ ಟ್ರೋಫಿ: ಗುಜರಾತ್‌ ವಿರುದ್ಧ ಕರ್ನಾಟಕಕ್ಕೆ ಲೀಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಗುಜರಾತ್‌ ವಿರುದ್ಧ 2ನೇ ದಿನ ಕರ್ನಾಟಕ 64 ರನ್‌ ಮುನ್ನಡೆ ಸಾಧಿಸಿದೆ. ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 328ರನ್‌ ಗಳಿಸಿದೆ. ಫಾರ್ಮ್‌ಗೆ ಮರಳಿರುವ ರಾಜ್ಯ ತಂಡದ ನಾಯಕ ಮಯಾಂಕ್‌ ಅಗರ್‌ವಾಲ್‌ ಶತಕ ಸಿಡಿಸಿದರು. ಬೃಹತ್‌ ಮೊತ್ತ ಗಳಿಸುವತ್ತ ರಾಜ್ಯ ತಂಡ ಮುನ್ನಡೆದಿದೆ.

 ಅಹಮದಾಬಾದ್‌: ನಿರ್ಣಾಯಕ ಸಮಯದಲ್ಲಿ ಮತ್ತೆ ಫಾರ್ಮ್‌ಗೆ ಮರಳಿರುವ ಮಯಾಂಕ್‌ ಅಗರ್‌ವಾಲ್‌, ಭರ್ಜರಿ ಶತಕದೊಂದಿಗೆ ಕರ್ನಾಟಕಕ್ಕೆ ಆಸರೆಯಾಗಿದ್ದಾರೆ. ಗುಜರಾತ್‌ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ 2ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 328 ರನ್‌ ಕಲೆಹಾಕಿದೆ. 

ತಂಡ ಸದ್ಯ 64 ರನ್‌ ಮುನ್ನಡೆಯಲ್ಲಿದ್ದು, ಬೃಹತ್‌ ಮೊತ್ತದ ನಿರೀಕ್ಷೆಯಲ್ಲಿದೆ.ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿದ್ದ ಗುಜರಾತ್‌, ಮೊದಲ ದಿನವೇ 264ಕ್ಕೆ ಆಲೌಟಾಗಿತ್ತು. ಶನಿವಾರ ಇನ್ನಿಂಗ್ಸ್‌ ಶುರು ಮಾಡಿದ ಕರ್ನಾಟಕಕ್ಕೆ ಭರ್ಜರಿ ಆರಂಭ ಲಭಿಸಿತು. 

ಮೊದಲ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ ಹಾಗೂ ಆರ್‌.ಸಮರ್ಥ್‌ 172 ರನ್‌ ಜೊತೆಯಾಟವಾಡಿದರು. ಸಮರ್ಥ್‌ 60 ರನ್‌ಗಳಿಸಿದ ಔಟಾದರೆ, ಗುಜರಾತ್‌ ಬೌಲರ್‌ಗಳನ್ನು ಚೆಂಡಾಡಿದ ಮಯಾಂಕ್‌ 16ನೇ ಪ್ರಥಮ ದರ್ಜೆ ಶತಕ ಪೂರ್ಣಗೊಳಿಸಿದರು. ಅವರು 124 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ನೊಂದಿಗೆ 109 ರನ್‌ ಸಿಡಿಸಿ ನಿರ್ಗಮಿಸಿದರು. ಇವರಿಬ್ಬರು ಒಟ್ಟೊಟ್ಟಿಗೇ ಪೆವಿಲಿಯನ್ ಸೇರಿದರು.

ಬಳಿಕ ಕ್ರೀಸ್‌ಗೆ ಬಂದ ದೇವದತ್‌ ಪಡಿಕ್ಕಲ್‌ 42, ಉಪನಾಯಕ ನಿಕಿನ್‌ ಜೋಸ್‌ 22 ರನ್ ಕೊಡುಗೆ ನೀಡಿದರು. ಸದ್ಯ ಮನೀಶ್‌ ಪಾಂಡೆ 97 ಎಸೆತಗಳಲ್ಲಿ 56 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಪಾದಾರ್ಪಣಾ ಪಂದ್ಯವಾಡುತ್ತಿರುವ ಸುಜತ್‌ ಸತೇರಿ(24) ಕೂಡಾ 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಗುಜರಾತ್‌ 264/10, ಕರ್ನಾಟಕ 328/5 (2ನೇ ದಿನದಂತ್ಯಕ್ಕೆ)(ಮಯಾಂಕ್‌ 109, ಸಮರ್ಥ್‌ 60, ಮನೀಶ್‌ 568, ಚಿಂತನ್ ಗಾಜ 2-43)

16ನೇ ಶತಕ: ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16ನೇ ಶತಕ ಬಾರಿಸಿದರು.