ಟೆಸ್ಟ್‌ ರ್‍ಯಾಂಕಿಂಗ್‌ : ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿ ರಿಷಭ್‌ 6ನೇ ಸ್ಥಾನಕ್ಕೆ

| Published : Oct 24 2024, 12:51 AM IST / Updated: Oct 24 2024, 04:07 AM IST

ಸಾರಾಂಶ

ಜೈಸ್ವಾಲ್‌ಗೆ 4ನೇ ಸ್ಥಾನ. 15ನೇ ಸ್ಥಾನಕ್ಕೆ ಕುಸಿದ ರೋಹಿತ್‌ ಶರ್ಮಾ. ಇಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.

ದುಬೈ: ಭಾರತದ ತಾರಾ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 99 ರನ್‌ ಸಿಡಿಸಿದ್ದ ರಿಷಭ್‌, ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ 3 ಸ್ಥಾನ ಪ್ರಗತಿ ಸಾಧಿಸಿದರು.

 ಕೊಹ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.ಯಶಸ್ವಿ ಜೈಸ್ವಾಲ್‌ ಭಾರತೀಯ ಬ್ಯಾಟರ್‌ಗಳ ಪೈಕಿ ಶ್ರೇಷ್ಠ ರ್‍ಯಾಂಕಿಂಗ್‌ ಹೊಂದಿದ್ದು, 4ನೇ ಸ್ಥಾನದಲ್ಲಿದ್ದಾರೆ. ರೋಹಿತ್‌ ಶರ್ಮಾ 2 ಸ್ಥಾನ ಕುಸಿದು ಜಂಟಿ 15ನೇ ಸ್ಥಾನ ತಲುಪಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ನಂ.1 ಸ್ಥಾನದಲ್ಲೇ ಮುಂದುವರಿದಿದ್ದು, ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ 2ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ(7ನೇ ಸ್ಥಾನ) ಅಗ್ರ ಹತ್ತರಲ್ಲಿರುವ ಮತ್ತೋರ್ವ ಭಾರತೀಯ ಬೌಲರ್‌.

3ನೇ ಟೆಸ್ಟ್‌ಗೆ ಬೂಮ್ರಾಗೆ ರೆಸ್ಟ್‌?: ಗಂಭೀರ್‌ ಸುಳಿವು

ಪುಣೆ: ನ್ಯೂಜಿಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯಕ್ಕೆ ಭಾರತೀಯ ವೇಗಿ ಜಸ್‌ಪ್ರೀತ್‌ ಬೂಮ್ರಾಗೆ ವಿಶ್ರಾಂತಿ ಸಿಗುವ ಸಾಧ್ಯೆತೆಯಿದೆ. ಈ ಬಗ್ಗೆ ಸ್ವತಃ ಕೋಚ್‌ ಗೌತಮ್‌ ಗಂಭೀರ್‌ ಸುಳಿವು ನೀಡಿದ್ದಾರೆ. ‘ನ್ಯೂಜಿಲೆಂಡ್‌ ಸರಣಿ ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ 10-12 ದಿನ ಬಿಡುವು ಇದೆ. ವೇಗಿಗಳಿಗೆ ಇದು ಸಾಕು. ಆದರೆ ಕೆಲಸದ ಒತ್ತಡದ ಗಮನದಲ್ಲಿಟ್ಟುಕೊಂಡು ಬೂಮ್ರಾಗೆ ವಿಶ್ರಾಂತಿ ನೀಡುವ ಬಗ್ಗೆ 2ನೇ ಟೆಸ್ಟ್‌ ಬಳಿಕ ನಿರ್ಧರಿಸುತ್ತೇವೆ. ಇತರ ವೇಗಿಗಳ ಬಗ್ಗೆಯೂ ನಾವು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಗಂಭೀರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.