ಸಾರಾಂಶ
ಲಖನೌ: ತಾವಾಡಿದ್ದು ಕೇವಲ ಎರಡೇ ಪಂದ್ಯಗಳಾಗಿದ್ದರೂ, ತಮ್ಮ ಪ್ರಚಂಡ ವೇಗದ ಮೂಲಕ ಎದುರಾಳಿಗಳ ನಿದ್ದೆಗೆಡಿಸಿರುವ ಲಖನೌ ತಂಡದ ಯುವ ವೇಗಿ ಮಯಾಂಕ್ ಯಾದವ್ ಈಗ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಲು ಕಾಯುತ್ತಿದ್ದಾರೆ.
ಭಾನುವಾರ ಇತ್ತಂಡಗಳು ಮುಖಾಮುಖಿಯಾಗುತ್ತಿದ್ದು, ಟೂರ್ನಿಯ 3ನೇ ಗೆಲುವಿಗಾಗಿ ಕಾಯುತ್ತಿವೆ.ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಲಖನೌ ಸತತ 2 ಜಯದೊಂದಿಗೆ ಮುನ್ನುಗ್ಗುತ್ತಿದೆ. ಮಯಾಂಕ್ ತಂಡದ ಟ್ರಂಪ್‌ಕಾರ್ಡ್ ಎನಿಸಿಕೊಂಡಿದ್ದು, ಎರಡೂ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಡಿ ಕಾಕ್, ಪೂರನ್ ಅಬ್ಬರಿಸುತ್ತಿದ್ದು, ರಾಹುಲ್ ಕೂಡಾ ಲಯಕ್ಕೆ ಮರಳುತ್ತಿದ್ದಾರೆ. ಆದರೆ ದೇವದತ್, ಸ್ಟೋಯ್ನಿಸ್ ವಿಫಲರಾಗುತ್ತಿರುವುದು ಫ್ರಾಂಚೈಸಿಯ ತಲೆಬಿಸಿಗೆ ಕಾರಣವಾಗಿದೆ.ಮತ್ತೊಂದೆಡೆ ಗುಜರಾತ್ ಟೂರ್ನಿಯಲ್ಲಿ ಅಸ್ಥಿರ ಆಟ ಪ್ರದರ್ಶಿಸುತ್ತಿದೆ. 4 ಪಂದ್ಯದಲ್ಲಿ 2ರಲ್ಲಿ ಗೆದ್ದಿರುವ ತಂಡ ಸುಧಾರಿತ ಆಟವಾಡಬೇಕಾದ ಅನಿವಾರ್ಯತೆಯಿದೆ. ನಾಯಕ ಗಿಲ್, ಸಾಯಿ ಸುದರ್ಶನ್ ಉತ್ತಮ ಲಯದಲ್ಲಿದ್ದರೂ, ಸಾಹ, ವಿಜಯ್ ಶಂಕರ್ ಮಿಂಚುತ್ತಿಲ್ಲ. ಕನ್ನಡಿಗ ಅಭಿನವ್ ಮನೋಹರ್ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಒಟ್ಟು ಮುಖಾಮುಖಿ: 04ಗುಜರಾತ್: 04ಲಖನೌ: 00
ಸಂಭವನೀಯ ಆಟಗಾರರ ಪಟ್ಟಿ
ಗುಜರಾತ್: ಸಾಹ, ಗಿಲ್(ನಾಯಕ), ಸುದರ್ಶನ್, ವಿಲಿಯಮ್ಸನ್, ವಿಜಯ್, ಅಜ್ಮತುಲ್ಲಾ, ತೆವಾಟಿಯಾ, ರಶೀದ್, ನೂರ್, ಉಮೇಶ್, ಮೋಹಿತ್.
ಲಖನೌ: ಡಿ ಕಾಕ್, ರಾಹುಲ್(ನಾಯಕ), ದೇವದತ್, ಸ್ಟೋಯ್ನಿಸ್, ಪೂರನ್, ಬದೋನಿ, ಕೃನಾಲ್, ಬಿಷ್ಣೋಯ್, ಯಶ್, ನವೀನ್, ಮಯಾಂಕ್.
ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ.