ಸಾರಾಂಶ
ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆ ಕ್ರಮಗಳನ್ನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಹೆಚ್ಚಿರುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಕರಾಟೆ ಶಾಲೆ ಎನಿಸಿಕೊಂಡಿರುವ ಓಎಸ್ ಕೆ ಫೆಡೇರೇಷನ್ ಆಫ್ ಇಂಡಿಯಾ ಮಹಿಳೆಯರಿಗೆ ಸುರಕ್ಷತಾ ಆಯಾಮಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಕರಾಟೆ ಮೂಲಕ ಸುರಕ್ಷತಾ ಆಯಾಮಗಳ ತರಬೇತಿ ನೀಡಿತು. ಮಹಿಳೆಯರು ಸ್ವರಕ್ಷಣೆಯಲ್ಲಿ ಈ ಕ್ರಮಗಳನ್ನ ಅನುಸರಿಸಿ ಅಪಾಯದಿಂದ ಪಾರಾಗುವ ಬಗ್ಗೆ ಕಲಿಸಿ ಕೊಡಲಾಯಿತು.ಇದೇ ವೇಳೆ ಕರಾಟೆಯಲ್ಲಿ ಕಷ್ಟಕರ ಆಯಾಮವಾಗಿರುವ ಟೈಲ್ಸ್ ಬ್ರೇಕಿಂಗ್ ವಿಧಾನವನ್ನ ಕೂಡ ಅವರಿಗೆ ತಿಳಿಸಿಕೊಡಲಾಯಿತು. ಈ ಕ್ರಮಗಳನ್ನ ಅನುಸರಿಸುವ ಬಗೆಯನ್ನ ತಿಳಿದುಕೊಂಡ ಮಹಿಳೆಯರು ಸಂತಸ ಹಂಚಿಕೊಂಡರು.ಈ ವೇಳೆ ಓಎಸ್‌ಕೆ ಫೆಡೇರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಕೆಣಿಚಿರಾ ಮಾತನಾಡಿ, ಪ್ರತಿ ಶಾಲಾಮಟ್ಟದಲ್ಲಿ ಕರಾಟೆಯನ್ನ ಸೇರಿಸಬೇಕು. ಮಹಿಳೆಯರ ರಕ್ಷಣೆಗೆ ಕರಾಟೆ ಉತ್ತರ ಎಂದು ಹೇಳಿದರು.ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿ ಶುರು
ಬರ್ಮಿಂಗ್‌ಹ್ಯಾಮ್: ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಸಾತ್ವಿಕ್-ಚಿರಾಗ್ ಶೆಟ್ಟಿ ತಮ್ಮ ಪ್ರಶಸ್ತಿ ಗೆಲುವಿನ ಓಟವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದ್ದು, ಮಂಗಳವಾರದಿಂದ ಆರಂಭಗೊಳ್ಳಲಿರುವ ಆಲ್ ಇಂಗ್ಲೆಂಡ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪಿ.ವಿ.ಸಿಂಧು ಕೂಡಾ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿ ಸ್ಪರ್ಧಿಸಲಿದ್ದಾರೆ.ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ 2 ಚಿನ್ನದ ಪದಕ ಮಾತ್ರ ಗೆದ್ದಿದೆ. 1980ರಲ್ಲಿ ಪ್ರಕಾಶ್ ಪಡುಕೋಣೆ, 2001ರಲ್ಲಿ ಪುಲ್ಲೇಲಾ ಗೋಪಿಚಂದ್ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಸೈನಾ ನೆಹ್ವಾಲ್(2015), ಲಕ್ಷ್ಯ ಸೇನ್(2022) ರನ್ನರ್-ಅಪ್ ಆಗಿದ್ದರು.ಈ ಬಾರಿ ಸೇನ್ ಜೊತೆ ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್, ಕಿದಂಬಿ ಶ್ರೀಕಾಂತ್, ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು, ಆಕರ್ಷಿ ಕಶ್ಯಪ್ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.1 ಸಾತ್ವಿಕ್-ಚಿರಾಗ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದು, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ, ಅಶ್ವಿನಿ-ತನಿಶಾ, ರುತುಪರ್ಣ-ಶ್ವೇತಪರ್ಣ ಸುಧಾರಿತ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.