ತಮ್ಮ ವಿರುದ್ಧವೇ ಪ್ರತಿಭಟನೆ ಕಂಡು ಮೆತ್ತಗಾದ್ರಾ ಸಾಕ್ಷಿ ಮಲಿಕ್‌?

| Published : Jan 04 2024, 01:45 AM IST

ತಮ್ಮ ವಿರುದ್ಧವೇ ಪ್ರತಿಭಟನೆ ಕಂಡು ಮೆತ್ತಗಾದ್ರಾ ಸಾಕ್ಷಿ ಮಲಿಕ್‌?
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಕುಸ್ತಿಪಟುಗಳು ತಮ್ಮ ವಿರುದ್ಧ ಪ್ರತಿಭಟನೆ ಆರಂಭಿಸುತ್ತಲೇ ಮೆತ್ತಗಾದ ಸಾಕ್ಷಿ ಮಲಿಕ್‌. ಬ್ರಿಜ್‌ಭೂಷಣ್‌ ಸಿಂಗ್‌ರ ಆಪ್ತ ಸಂಜಯ್‌ ಸಿಂಗ್‌ ಒಬ್ಬರನ್ನು ಅಧಿಕಾರದಿಂದ ದೂರವಿಡಿ ಸಾಕು ಎಂದ ಒಲಿಂಪಿಕ್ಸ್‌ ಪದಕ ವಿಜೇತೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್‌ಐ)ಗೆ ಹೊಸದಾಗಿ ಆಯ್ಕೆಯಾದ ಬ್ರಿಜ್‌ಭೂಷಣ್‌ ಬಳಗದ ಎಲ್ಲಾ ಪದಾಧಿಕಾರಿಗಳನ್ನು ವಿರೋಧಿಸುತ್ತಿದ್ದ ಕುಸ್ತಿಪಟು ಸಾಕ್ಷಿ ಮಲಿಕ್‌, ಈಗ ಸ್ವಲ್ಪ ಮೆತ್ತಗಾದಂತೆ ಕಾಣುತ್ತಿದೆ. ಬುಧವಾರ ಯುವ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿರುವ ಸಾಕ್ಷಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಸಂಜಯ್‌ ಸಿಂಗ್‌ರನ್ನು ಹೊರತುಪಡಿಸಿ ಮತ್ತ್ಯಾರ ಬಗ್ಗೆಯೂ ತಕರಾರಿಲ್ಲ ಎಂದರು.

‘ಬ್ರಿಜ್‌ ಆಪ್ತ ಸಂಜಯ್‌ ಒಬ್ಬರನ್ನು ಅಧಿಕಾರದಿಂದ ದೂರವಿಡಬೇಕು. ಅವರೊಬ್ಬರನ್ನು ಹೊರತುಪಡಿಸಿ, ಚುನಾವಣೆಯಲ್ಲಿ ಆಯ್ಕೆಯಾಗಿರುವ ಉಳಿದವರ ಪೈಕಿ ಬೇರೇ ಯಾರಾದರೂ ಅಧ್ಯಕ್ಷರಾದರೆ ಯಾವುದೇ ಆಕ್ಷೇಪವಿಲ್ಲ’ ಎಂದು ಸಾಕ್ಷಿ ಹೇಳಿದರು.ಕಳೆದ ಡಿ.21ರಂದು ನಡೆದ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಂಜಯ್‌ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸಾಕ್ಷಿ, ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು.

ಬ್ರಿಜ್‌ ಬೆಂಬಲಿಗರಿಂದ ಬೆದರಿಕೆ ಕರೆ: ಸಾಕ್ಷಿ ಆರೋಪಬ್ರಿಜ್‌ಭೂಷಣ್‌ ವಿರುದ್ಧ ಆರೋಪ ಮುಂದುವರಿಸಿರುವ ಸಾಕ್ಷಿ ಮಲಿಕ್‌ 2-3 ದಿನಗಳಿಂದ ತಮ್ಮ ತಾಯಿಗೆ ಬ್ರಿಜ್‌ ಆಪ್ತರಿಂದ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಹೇಳಿದ್ದಾರೆ. ‘ಅನೇಕರು ನಮ್ಮ ತಾಯಿಗೆ ಕರೆ ಮಾಡಿ, ನಿಮ್ಮ ಕುಟುಂಬದವರ ಮೇಲೆ ಇಲ್ಲಸಲ್ಲದ ಕೇಸ್‌ ದಾಖಲು ಮಾಡುತ್ತೇವೆ’ ಎಂದು ಬೆದರಿಸುತ್ತಿದ್ದಾರೆ ಎಂದು ಸಾಕ್ಷಿ ಆರೋಪಿಸಿದ್ದಾರೆ.