ಸಾತ್ವಿಕ್‌-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್‌ ಕಿರೀಟ

| Published : Jan 15 2024, 01:49 AM IST

ಸಾರಾಂಶ

ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಫೈನಲ್‌ನಲ್ಲಿ ವಿಶ್ವ ನಂ.1 ಚೀನಾದ ಲಿಯಾಂಗ್‌ ವೆಯ್ ಕೆಂಗ್‌-ವ್ಯಾಂಗ್‌ ಚಾಂಗ್‌ ಜೋಡಿಗೆ ಶರಣಾಯಿತು.

ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಫೈನಲ್‌ನಲ್ಲಿ ವಿಶ್ವ ನಂ.1 ಚೀನಾದ ಲಿಯಾಂಗ್‌ ವೆಯ್ ಕೆಂಗ್‌-ವ್ಯಾಂಗ್‌ ಚಾಂಗ್‌ ಜೋಡಿಗೆ ಶರಣಾಯಿತು.

ಕೌಲಾ ಲಂಪುರ: ಭಾರತದ ತಾರಾ ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದರೊಂದಿಗೆ ಈ ವರ್ಷವನ್ನು ಪ್ರಶಸ್ತಿಯೊಂದಿಗೆ ವಿಶ್ವ ನಂ.2 ಜೋಡಿಯ ಕನಸಿಗೆ ಹಿನ್ನಡೆಯಾಗಿದೆ.

ಭಾನುವಾರ ನಡೆದ ಅತಿ ರೋಚಕ ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ ವಿಶ್ವ ನಂ.1, ಚೀನಾದ ಲಿಯಾಂಗ್‌ ವೆಯ್ ಕೆಂಗ್‌-ವ್ಯಾಂಗ್‌ ಚಾಂಗ್‌ ವಿರುದ್ಧ 21-9, 18-21, 17-21ರಲ್ಲಿ ಸೋಲನುಭವಿಸಿತು. ಮೊದಲ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಸಾತ್ವಿಕ್‌-ಚಿರಾಗ್‌, ಪ್ರಬಲ ಸ್ಮ್ಯಾಶ್‌ಗಳ ಮೂಲಕ ಸುಲಭವಾಗಿ ಜಯಗಳಿಸಿತು. ಆದರೆ ಬಳಿಕ 2 ಗೇಮ್‌ಗಳಲ್ಲಿ ಚೀನಾ ಜೋಡಿ ತೀವ್ರ ಪೈಪೋಟಿ ನೀಡಿ, ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದು ಚೀನಾ ಜೋಡಿ ವಿರುದ್ಧ ಸಾತ್ವಿಕ್‌-ಚಿರಾಗ್‌ಗೆ 4ನೇ ಸೋಲು. ಕೇವಲ 1 ಬಾರಿ ಮಾತ್ರ ಭಾರತೀಯರು ಗೆದ್ದಿದ್ದಾರೆ.