ಸಾರಾಂಶ
ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ. ವಿಶ್ವ ನಂ.1 ಜೋಡಿಗೆ ಈ ವರ್ಷ ಮೊದಲನೇ ಪ್ರಶಸ್ತಿ.
ಪ್ಯಾರಿಸ್: ವಿಶ್ವ ನಂ.1 ಜೋಡಿಯಾದ ಭಾರತದ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ, ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಚಾಂಪಿಯನ್ ಆಗಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಯಾಂಗ್ ಪೊ-ಲೀ ಹ್ಯುಯಿ ವಿರುದ್ಧ 21-11, 21-17 ನೇರ ಗೇಮ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.
ಇದು ಸಾತ್ವಿಕ್-ಚಿರಾಗ್‌ಗೆ 2ನೇ ಫ್ರೆಂಚ್ ಓಪನ್ ಪ್ರಶಸ್ತಿ. 2022ರಲ್ಲೂ ಈ ಜೋಡಿ ಚಾಂಪಿಯನ್ ಆಗಿತ್ತು. ಈ ವರ್ಷದ ಮೊದಲ ಪ್ರಶಸ್ತಿ ಗೆದ್ದಿರುವ ಭಾರತೀಯ ಜೋಡಿ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಭರವಸೆ ಮೂಡಿಸಿದೆ. ಇದೇ ವೇಳೆ ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಸೋತು ನಿರಾಸೆ ಅನುಭವಿಸಿದರು. ಥಾಯ್ಲೆಂಡ್‌ನ ವಿಟಿಡ್ಸರ್ನ್ ವಿರುದ್ಧ ಲಕ್ಷ್ಯ 22-20, 13-21, 11-21ರಲ್ಲಿ ಸೋಲುಂಡರು. ವಿಟಿಡ್ಸರ್ನ್ ಫೈನಲ್‌ನಲ್ಲಿ ಚೀನಾದ ಶೀ ಯೂಕಿ ವಿರುದ್ಧ ಸೋತರು.